Bangladeshi Infiltrators Arrested : ಜನವರಿಯಲ್ಲಿ ಕೇರಳದಲ್ಲಿ ಒಟ್ಟು 34 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಕೊಚ್ಚಿ (ಕೇರಳ) – ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ 27 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ. ಆವರನ್ನು ಎರ್ನಾಕುಲಂ ಜಿಲ್ಲೆಯ ಉತ್ತರ ಪರವುರು ಪ್ರದೇಶದಿಂದ ಬಂಧಿಸಲಾಯಿತು. ಜನವರಿಯಲ್ಲಿ ಕೇರಳ ಪೊಲೀಸರು ಒಟ್ಟು 34 ಬಾಂಗ್ಲಾದೇಶಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ನಿಡಿದ ಮಾಹಿತಿಯನುಸಾರ, ಬಾಂಗ್ಲಾದೇಶಿ ನುಸುಳುಕೋರರು ಬಂಗಾಳದ ಕಾರ್ಮಿಕರಂತೆ ನಟಿಸುತ್ತಾ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು. ಗಡಿ ದಾಟಿದ ನಂತರ, ಅವರು ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಮಾಡಿಕೊಂಡಿದ್ದರು. ಆಧಾರ್ ಕಾರ್ಡ್‌ಗಳನ್ನು ಮಾಡಿದವರನ್ನು ಪೊಲೀಸರು ಈಗ ಹುಡುಕುತ್ತಿದ್ದಾರೆ.