ಇಸ್ರೋದಿಂದ 100ನೇ ಉಪಗ್ರಹ ಯಶಸ್ವೀ ಉಡಾವಣೆ

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ ಧವನ್ ಉಡಾವಣಾ ಕೇಂದ್ರದಿಂದ ಜಿಎಸ್ಎಲ್ವಿ ಉಡಾವಣೆ ಮಾಡಿದೆ. (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) – ‘ಎನ್.ವಿ.ಎಸ್.-02’ ಉಪಗ್ರಹವನ್ನು ಎಫ್15 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಇದು ಇಸ್ರೋದ 100ನೇ ಉಡಾವಣಾ ಕಾರ್ಯಾಚರಣೆಯಾಗಿದೆ.

ಇಸ್ರೋ, ‘NVS-02’ ಉಪಗ್ರಹ ನೆವಿಗೇಶನ್ ವ್ಯವಸ್ಥೆಯ ಒಂದು ಭಾಗವಾಗಿದ್ದು, ಇದು ಭಾರತದ GPS ನಂತಹ ನೆವಿಗೇಶನ್ ಸೌಲಬ್ಯವನ್ನು ಹೆಚ್ಚಿಸಲು ಇದನ್ನು ತಯಾರಿಸಲಾಗಿದೆ. ಈ ವ್ಯವಸ್ಥೆಯು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಅರುಣಾಚಲ ಪ್ರದೇಶದವರೆಗೆ ಮಾಹಿತಿಯನ್ನು ಒದಗಿಸುತ್ತದೆ. ಇದು ಕರಾವಳಿಯಿಂದ 1 ಸಾವಿರದ 500 ಕಿ.ಮೀ ವರೆಗಿನ ದೂರವನ್ನು ಸಹ ತೋರಿಸುತ್ತದೆ. ಇದು ಆಕಾಶ, ಸಮುದ್ರ ಮತ್ತು ರಸ್ತೆ ಪ್ರಯಾಣಕ್ಕೆ ಉತ್ತಮ ಸಂಚರಣೆಯಲ್ಲಿ ಸಹಾಯ ಮಾಡುತ್ತದೆ. ಇಸ್ರೋ ಆಗಸ್ಟ್ 15, 1969 ರಂದು ಸ್ಥಾಪನೆಯಾಯಿತು, ಮತ್ತು ಅದರ ಮೊದಲ ಕಾರ್ಯಾಚರಣೆ ಆಗಸ್ಟ್ 10, 1979 ರಂದು ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಅಂದಿನಿಂದ, ಡಿಸೆಂಬರ್ 30, 2024 ರ ಹೊತ್ತಿಗೆ 99 ಕಾರ್ಯಾಚರಣೆಗಳು ಪೂರ್ಣಗೊಂಡಿವೆ.