HJS Maha Kumbh Display : ಮಹಾಕುಂಭ ಪರ್ವದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿ ಮೆಚ್ಚಿದ ಯುವಕರು; ಕಾರ್ಯದಲ್ಲಿ ಪಾಲ್ಗೊಳ್ಳುವ ಸಿದ್ಧತೆ !

ಪ್ರಯಾಗರಾಜ – ಹಿಂದೂ ಧರ್ಮದ ಮೇಲಾಗುತ್ತಿರುವ ಅನೇಕ ಆಘಾತ, ಹಿಂದೂ ರಾಷ್ಟ್ರದ ಪರಿಕಲ್ಪನೆ, ಧರ್ಮ ಶಿಕ್ಷಣ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯು ಆರಂಭಿಸಿರುವ ಕಾರ್ಯದ ಬಗ್ಗೆ ಮಹಾಕುಂಭ ಪರ್ವದಲ್ಲಿ ಸಮಿತಿಯು ಏರ್ಪಡಿಸಿದ ಗ್ರಂಥ ಮತ್ತು ಫಲಕ ಪ್ರದರ್ಶನ ಯುವಕರಿಗೆ ಮೆಚ್ಚುಗೆಯಾಗಿದೆ. ವೈಜ್ಞಾನಿಕ ಪರಿಭಾಷೆಯಲ್ಲಿ ಧರ್ಮದ ಸ್ವರೂಪ, ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆ ತಿಳಿದುಕೊಳ್ಳಲು ಯುವಕ ಯುವತಿಯರು ಉತ್ಸುಕರಾಗಿರುವುದು ಕಂಡುಬಂತು. ಕುಂಭ ಕ್ಷೇತ್ರ ಸೆಕ್ಟರ್ 6 ರಲ್ಲಿ ಕೈಲಾಸ ಪುರಿ ಭಾರದ್ವಾಜ್ ಮಾರ್ಗ ವೃತ್ತದಲ್ಲಿ ಇರುವ ಈ ಪ್ರದರ್ಶನಿಗೆ ಇಲ್ಲಿಯವರೆಗೆ ಸಾವಿರಾರು ಯುವಕ ಯುವತಿಯರು ಭೇಟಿ ನೀಡಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ತಿಳಿದುಕೊಂಡಿದ್ದಾರೆ. ಇದರಲ್ಲಿ ಅನೇಕರು ಸಮಿತಿಯ ಧರ್ಮ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಿದ್ಧತೆಯನ್ನೂ ಕೂಡ ತೋರಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಧರ್ಮ ಪ್ರೇಮಿಗಳು ಮತ್ತು ಯುವಕರು.

ಮಹಾಕುಂಭಮೇಳದಲ್ಲಿ ವಿವಿಧ ರಾಜ್ಯದಿಂದ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಯುವಕರು ಕುಂಭ ಪರ್ವಕ್ಕೆ ಬಂದ ನಂತರ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿಗೆ ಅಗತ್ಯವಾಗಿ ಭೇಟಿ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಪ್ರದರ್ಶನಿಯಲ್ಲಿರುವ ಫಲಕಗಳ ಪ್ರಚಾರ ಮಾಡಲು ಎಲ್ಲಾ ಯುವಕರು ತಮ್ಮ ಮೊಬೈಲ್ ನಲ್ಲಿ ಪ್ರದರ್ಶನಿಯಲ್ಲಿನ ಫಲಕಗಳ ಛಾಯಾ ಚಿತ್ರಗಳನ್ನು ಕೂಡ ಸೆರೆಹಿಡಿದರು. ಪ್ರದರ್ಶನಿ ನೋಡಿದ ನಂತರ’ ‘ಸೆಲ್ಫಿ ಪಾಯಿಂಟ್ ‘ನಲ್ಲಿ ‘ಜಯತು ಜಯತು ಹಿಂದೂ ರಾಷ್ಟ್ರಮ್ ‘ಎಂದು ಘೋಷಣೆ ನೀಡುತ್ತಾ ಭಕ್ತರು ತಮ್ಮ ಛಾಯಾ ಚಿತ್ರಗಳನ್ನು ಚಿತ್ರಿಸಿದರು. ಪ್ರದರ್ಶನಿಗೆ ಭೇಟಿ ನೀಡಿರುವ ಧರ್ಮಪ್ರೇಮಿಗಳು ನೋಂದಾಯಿಸಿರುವ ಅಭಿಪ್ರಾಯಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಬೇಡಿಕೆಗೆ ಬೆಂಬಲ ಸೂಚಿಸಿದರು.

ಹಿಂದೂ ರಾಷ್ಟ್ರ ಏಕೆ ಬೇಕು ? ಈ ಗ್ರಂಥಕ್ಕೆ ಅಪಾರ ಬೇಡಿಕೆ!

ಪ್ರದರ್ಶಿನಿಯಲ್ಲಿ ‘ ಹಿಂದೂ ರಾಷ್ಟ್ರ ಏಕೆ ಬೇಕು ? ‘ ‘ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ ‘ಮುಂತಾದ ಗ್ರಂಥಗಳಿಗೆ ಭಕ್ತರಿಂದ ಎಲ್ಲಕ್ಕಿಂತ ಹೆಚ್ಚಿನ ಬೇಡಿಕೆ ಇತ್ತು.
ಪ್ರದರ್ಶನಿಯಲ್ಲಿ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ, ಹಾಗೂ ಕಾಶ್ಮೀರಿ ಹಿಂದುಗಳ ಮೇಲಾದ ನಿರಂತರ ದೌರ್ಜನ್ಯದ ವಸ್ತುಸ್ಥಿತಿ ಮಂಡಿಸಲಾಯಿತು. ಹಿಂದೂ ಸಂತರ ಹತ್ಯೆಗಳು , ಹಾಗೂ ಲವ್ ಜಿಹಾದ್ ನ ಭೀಕರತೆಯ ವಾಸ್ತವ ನೋಡಿ ಹಿಂದುಗಳಲ್ಲಿ ಜಾಗೃತಿ ಮೂಡುತ್ತಿದೆ ಎಂಬ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪರಿಣಾಮಕಾರಿ ಪ್ರದರ್ಶನಿಯನ್ನು ತಮ್ಮ ತಮ್ಮ ಜಿಲ್ಲೆಯಲ್ಲಿ ಏರ್ಪಡಿಸುವ ಸಿದ್ಧತೆಯನ್ನು ಸಹ ಧರ್ಮ ಪ್ರೇಮಿಗಳು ತೋರಿಸಿದರು. ತಮ್ಮ ತಮ್ಮ ಪ್ರದೇಶದಲ್ಲಿ ಸ್ವರಕ್ಷಣ ಪ್ರಶಿಕ್ಷಣ ಆರಂಭಿಸಲು ಪ್ರಯತ್ನಿಸುವುದು, ಧರ್ಮಶಿಕ್ಷಣ ವರ್ಗದ ಆಯೋಜನೆಗಾಗಿ ಪ್ರಯತ್ನ ಮಾಡುವುದು ಈ ರೀತಿ ಅನೇಕರು  ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿದ್ಧತೆಯನ್ನು ತೋರಿಸಿದರು .