ಶ್ರೀನಗರದಲ್ಲಿನ ಜಾಮಿಯಾ ಮಸೀದಿಯಲ್ಲಿ ‘ಶಬ್-ಏ-ಬಾರಾತ’ದ ರಾತ್ರಿ ನಮಾಜ್‌ಗೆ ನಿಷೇಧ !

ಪೊಲೀಸರು ಬೀಗ ಜಡಿದರು !

(ಶಬ್-ಏ-ಬಾರಾತ ಇದು ಮುಸಲ್ಮಾನರ ಒಂದು ಮಹತ್ವದ ಹಬ್ಬವಾಗಿದ್ದು ಆ ದಿನದಂದು ಅವರು ಅಲ್ಲಾನ ಆಶೀರ್ವಾದ ಬೇಡುವುದರ ಜೊತೆಗೆ ಅವರು ಮಾಡಿರುವ ಕೆಟ್ಟ ಕೃತ್ಯಗಳಿಗಾಗಿ ಕ್ಷಮೆ ಯಾಚಿಸುತ್ತಾರೆ.)

ಶ್ರೀನಗರ – ಶ್ರೀನಗರದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ‘ಶಬ್-ಏ-ಬಾರಾತ’ದ ರಾತ್ರಿ ಜಮ್ಮು-ಕಾಶ್ಮೀರ ಪೊಲೀಸರು ಸಾಮೂಹಿಕ ನಮಾಜ್‌ಗೆ ಅನುಮತಿ ನಿರಾಕರಿಸಿದ್ದಾರೆ. ಇದರ ಜೊತೆಗೆ ನಮಾಜ್ಜ್‌ಗೆ ಬಂದಿರುವ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವ ಪ್ರತ್ಯೇಕತಾವಾದೀ ನಾಯಕ ಮಿರವಾಯಿಜ್ ಉಮರ್ ಪಾರುಖ್ ಇವನನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ ಅಬ್ದುಲ್ಲ ಇವರು ಈ ನಿರ್ಣಯವನ್ನು ದುರಾದೃಷ್ಟಕರ ಎಂದು ಹೇಳಿದ್ದಾರೆ. ಅವರು, ಜಾಮಿಯಾ ಮಸೀದಿ ಮುಚ್ಚಿರುವುದರಿಂದ ಸರಕಾರಕ್ಕೆ ತಮ್ಮ ಮೇಲೆ ಮತ್ತು ಜನರ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಮಸೀದಿಯ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಅಂಜುಮನ್ ಔಕಾಫ್ ಇವನು, ಪೊಲೀಸರು ಫೆಬ್ರುವರಿ ೧೩ ರಂದು ಮಸೀದಿ ಖಾಲಿ ಮಾಡಲು ಹೇಳಿದರು ಮತ್ತು ನಂತರ ಮಸೀದಿಗೆ ಬೀಗ ಹಾಕಿದರು, ಎಂದು ಹೇಳಿದನು.

ಸತತ ೬ ವರ್ಷಗಳಿಂದ ನಮಾಜಗೆ ನಿಷೇಧ !

ಜಾಮಿಯಾ ಮಸೀದಿಯಲ್ಲಿ ‘ಶಬ್-ಏ-ಬಾರಾತ’ ದ ರಾತ್ರಿ ಸಾಮೂಹಿಕ ನಮಾಜ ಮಾಡಲು ಪೊಲೀಸರ ಅನುಮತಿ ನಿರಾಕರಿಸಿರುವುದು ಸತತ ಆರನೆಯ ವರ್ಷವಾಗಿದೆ. ೨೦೧೯ ರಿಂದ ಇಲ್ಲಿ ನಮಾಜ ಮಾಡಲು ಅನುಮತಿ ಇಲ್ಲ. ಅಂಜುಮನ್ ಔಕಾಫ್ ಈ ನಿಷೇಧವನ್ನು ದಬ್ಬಾಳಿಕೆಯ ನಿರ್ಣಯ ಎಂದಿದ್ದಾನೆ. ಅವನು, ಹೀಗೆ ಮೇಲಿಂದ ಮೇಲೆ ನಿಷೇಧದಿಂದ ಜನರ ಧಾರ್ಮಿಕ ಭಾವನೆಗೆ ನೋವು ಉಂಟಾಗುತ್ತದೆ, ಅಲ್ಲದೆ ಅವರ ಧಾರ್ಮಿಕ ಮೂಲಭೂತ ಅಧಿಕಾರದ ಉಲ್ಲಂಘನೆ ಕೂಡ ಆಗುತ್ತದೆ’, ಎಂದು ಹೇಳಿದನು.

ಸಂಪಾದಕೀಯ ನಿಲುವು

ಈ ಘಟನೆಯಿಂದ ಭಾರತದಲ್ಲಿನ ಜಾತ್ಯತೀತರ ಜೊತೆಗೆ ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳು. ‘ಮುಸಲ್ಮಾನದ್ವೇಷ’ ಮತ್ತು ‘ಅಧಿಕಾರಶಾಹಿ’ ಹೀಗೆ ರಾಗ ತೆಗೆದು ಭಾರತವನ್ನು ಕಾಶ್ಮೀರ ವಿರೋಧಿ ಎಂದು ಹೇಳಲು ಆರಂಭಿಸಿದರೆ, ಅದರಲ್ಲಿ ಆಶ್ಚರ್ಯ ಏನೂ ಇಲ್ಲ !