ಡೆಹ್ರಾಡೂನ್ (ಉತ್ತರಾಖಂಡ) – ಜನವರಿ 27 ರಿಂದ ಉತ್ತರಾಖಂಡದಲ್ಲಿ ಸಮಾನ ನಾಗರಿಕ ಕಾಯಿದೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇವರು ಘೋಷಣೆ ಮಾಡಿದರು. ಈ ಕಾನೂನಿಗೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಈ ವೆಬ್‌ಸೈಟ್‌ನ ವಿಳಾಸ ucc.uk.gov.in. ಸ್ವತಂತ್ರ ಭಾರತದಲ್ಲಿ ಈ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡ ಆಗಿದೆ. ಹಿಂದೆ, ಈ ಕಾನೂನು ಗೋವಾದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು; ಆದಾಗ್ಯೂ, ಇದು ಪೋರ್ಚುಗೀಸರ ಕಾಲದಿಂದಲೂ ಬಳಕೆಯಲ್ಲಿದೆ.
ಇದು ತುಂಬಾ ಭಾವನಾತ್ಮಕ ಕ್ಷಣ ಎಂದು ಮುಖ್ಯಮಂತ್ರಿ ಧಾಮಿ ಹೇಳಿದರು. 30 ವರ್ಷಗಳ ಹಿಂದೆ ರಾಜ್ಯದ ಜನರಿಗೆ ನೀಡಿದ್ದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ಇದಕ್ಕಾಗಿ ನಮ್ಮ ತಂಡ ಶ್ರಮಿಸಿದೆ. ಸಮಾನ ನಾಗರಿಕ ಕಾಯಿದೆಯ ಜಾರಿಯಿಂದಾಗಿ ಸಮಾಜದಲ್ಲಿ ಸಾಮರಸ್ಯವನ್ನು ತರುತ್ತದೆ. ರಾಜ್ಯದ ಎಲ್ಲಾ ನಾಗರಿಕರು ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತಾರೆ.
ಸಮಾನ ನಾಗರಿಕ ಕಾಯಿದೆಯಲ್ಲಿನ ಕೆಲವು ನಿಯಮಗಳು!
1. ಮಗ ಮತ್ತು ಮಗಳು ಇಬ್ಬರೂ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ.
2. ಒಬ್ಬ ವ್ಯಕ್ತಿಯ ಮರಣ ಹೊಂದಿದರೆ, ಸಮಾನ ನಾಗರಿಕ ಕಾಯಿದೆಯು ಆ ವ್ಯಕ್ತಿಯ ಆಸ್ತಿಯನ್ನು ಅವರ ಸಂಗಾತಿ ಮತ್ತು ಮಕ್ಕಳಲ್ಲಿ ಸಮಾನವಾಗಿ ವಿತರಿಸುವ ಹಕ್ಕನ್ನು ಒದಗಿಸುತ್ತದೆ. ಅಲ್ಲದೆ, ಆ ವ್ಯಕ್ತಿಯ ಪೋಷಕರು ಸಹ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಹಿಂದಿನ ಕಾನೂನಿನಲ್ಲಿ, ಈ ಹಕ್ಕು ಮೃತರ ತಾಯಿಗೆ ಮಾತ್ರ ಲಭ್ಯವಿತ್ತು.
3. ಗಂಡ ಮತ್ತು ಹೆಂಡತಿ ಇಬ್ಬರಿಗೂ ಒಂದೇ ರೀತಿಯ ಕಾರಣಗಳಿದ್ದಾಗ ಮಾತ್ರ ವಿಚ್ಛೇದನವನ್ನು ನೀಡಲಾಗುತ್ತದೆ. ಒಂದು ಪಕ್ಷವು ಮಾತ್ರ ಕಾರಣಗಳನ್ನು ನೀಡಿದರೆ ವಿಚ್ಛೇದನವನ್ನು ನೀಡಲಾಗುವುದಿಲ್ಲ. ‘ಹಲಾಲಾ’ (ವಿಚ್ಛೇದನ ಪಡೆದ ನಂತರ ಮುಸ್ಲಿಂ ಮಹಿಳೆ ಅದೇ ವ್ಯಕ್ತಿಯನ್ನು ಮರುಮದುವೆಯಾಗಲು ಬಯಸಿದರೆ, ಹಾಗೆ ಮಾಡುವ ಮೊದಲು ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಬೇಕು) ನಂತಹ ಆಚರಣೆಗಳನ್ನು ರದ್ದುಗೊಳಿಸಲಾಗುತ್ತದೆ. ಮಹಿಳೆ ಮರುಮದುವೆಯಾಗಲು ಯಾವುದೇ ಷರತ್ತುಗಳನ್ನು ನಿಷೇಧಿಸಲಾಗುತ್ತದೆ.
4. ಉತ್ತರಾಖಂಡದಲ್ಲಿ ವಾಸಿಸುವ ‘ಲಿವ್-ಇನ್ ರಿಲೆಶನ್ ಶಿಪ’ (ಮದುವೆಯಾಗದೆ ಪುರುಷ ಮತ್ತು ಮಹಿಳೆ ಒಟ್ಟಿಗೆ ವಾಸಿಸುವ) ಇದ್ದರೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ಸ್ವಯಂ ಘೋಷಿತ ನಿಯಮವಾಗಿದ್ದರೂ, ಪರಿಶಿಷ್ಟ ಪಂಗಡದ ಜನರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
5. ‘ಲಿವ್-ಇನ್ ರಿಲೇಶಷನಶಿಪ್’ದಿಂದ ಮಗು ಜನಿಸಿದರೆ, ಅದರ ಜವಾಬ್ದಾರಿ ‘ಲಿವ್-ಇನ್’ ದಂಪತಿಗಳ ಮೇಲಿರುತ್ತದೆ. ಅವರಿಬ್ಬರೂ ಮಗುವಿಗೆ ಹೆಸರಿಡಬೇಕು. ಇದು ರಾಜ್ಯದ ಪ್ರತಿಯೊಂದು ಮಗುವಿಗೂ ಗುರುತನ್ನು ನೀಡುತ್ತದೆ. ಈ ದಂಪತಿಗಳು ನೋಂದಣಿ ರಶೀದಿಯನ್ನು ಒದಗಿಸುವ ಮೂಲಕ ಮಾತ್ರ ಮನೆ ಅಥವಾ ಹಾಸ್ಟೆಲ್ ಅನ್ನು ಬಾಡಿಗೆಗೆ ಪಡೆಯಬಹುದು ಅಥವಾ ‘ಪೇಯಿಂಗ್ ಗೆಸ್ಟ್’ಗಳಾಗಿ ಉಳಿಯಬಹುದು.
6. ಲಿವ್-ಇನ್ ರಿಲೇಶನಶಿಪ್‌ನಲ್ಲಿರುವವರು ವಿಚ್ಛೇದನವನ್ನು ನೋಂದಾಯಿಸುವುದು ಸಹ ಕಡ್ಡಾಯವಾಗಿರುತ್ತದೆ. ನೋಂದಣಿ ಮಾಡದಿದ್ದರೆ 6 ತಿಂಗಳ ಜೈಲು ಶಿಕ್ಷೆ ಅಥವಾ 25 ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
7. ಎಲ್ಲಾ ಧಾರ್ಮಿಕ ಸಮುದಾಯಗಳಲ್ಲಿ ಮದುವೆ, ವಿಚ್ಛೇದನ, ಜೀವನಾಂಶ ಮತ್ತು ಉತ್ತರಾಧಿಕಾರಕ್ಕೆ ಸಮಾನ ಕಾನೂನು.
8. ಪ್ರತಿ ದಂಪತಿಗಳು ವಿಚ್ಛೇದನ ಮತ್ತು ವಿವಾಹವನ್ನು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ನೋಂದಣಿ ಮಾಡದಿದ್ದರೆ 25 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು ಮತ್ತು ಸರಕಾರಿ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ.
9. ಮದುವೆಗೆ ಕನಿಷ್ಠ ವಯಸ್ಸು ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷಗಳಾಗಿರಲಿದೆ.
10. ಯಾರಾದರೂ ಒಪ್ಪಿಗೆಯಿಲ್ಲದೆ ಮತಾಂತರಗೊಂಡರೆ, ಆ ವ್ಯಕ್ತಿಗೆ ವಿಚ್ಛೇದನ ನೀಡುವ ಮತ್ತು ಜೀವನಾಂಶ ಪಡೆಯುವ ಹಕ್ಕಿದೆ.
11. ಗಂಡ ಹೆಂಡತಿ ಇಬ್ಬರೂ ಜೀವಂತವಾಗಿರುವಾಗ ಮರುಮದುವೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಗಂಡ-ಹೆಂಡತಿಯ ನಡುವೆ ವಿಚ್ಛೇದನ ಅಥವಾ ಕೌಟುಂಬಿಕ ವಿವಾದ ಉಂಟಾದರೆ, 5 ವರ್ಷದವರೆಗಿನ ಮಗುವಿನ ಪಾಲನೆ ಅವನ/ಅವಳ ತಾಯಿಯ ಬಳಿಯೇ ಇರುತ್ತದೆ.
12. ಕಾನೂನುಬದ್ಧ ಮತ್ತು ಅಕ್ರಮ ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಅಕ್ರಮವಾಗಿ ಜನಿಸಿದ ಮಕ್ಕಳನ್ನು ಸಹ ದಂಪತಿಗಳ ಜೈವಿಕ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಬೇರೆ ತಾಯಿ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಜನಿಸಿದ ಮಕ್ಕಳು ಜೈವಿಕ ಮಕ್ಕಳಾಗಿರುತ್ತಾರೆ.
Uttarakhand has become the first state in India to implement the Uniform Civil Code (UCC) 📚, a law that aims to create equal laws for every citizen across all religions. 📜
The UCC applies to all residents of Uttarakhand, except Scheduled Tribes and protected… pic.twitter.com/By7EOOa6XH
— Sanatan Prabhat (@SanatanPrabhat) January 27, 2025
ಸಂಪಾದಕೀಯ ನಿಲುವುಭಾಜಪ ಆಡಳಿತವಿರುವ ಇತರ ರಾಜ್ಯಗಳು ಇಂತಹ ಕಾನೂನನ್ನು ಜಾರಿಗೆ ತರುವ ಬದಲು, ಕೇಂದ್ರ ಸರಕಾರವು ಈ ಕಾನೂನನ್ನು ಜಾರಿಗೆ ತರಬೇಕೆಂದು ಹಿಂದೂಗಳ ನಿರೀಕ್ಷೆ ! |