ಭಾರತದಿಂದ ಭಾರ್ಗವಾಸ್ತ್ರ: ಭಾರತವು ಅಭಿವೃದ್ಧಿ ಪಡಿಸಿದ ‘ಭಾರ್ಗವಾಸ್ತ್ರ’ ಹೆಸರಿನ ಡ್ರೋನ್ ವಿರೋಧಿ ವ್ಯವಸ್ಥೆ
ನವ ದೆಹಲಿ: ಮಹಾಭಾರತದಲ್ಲಿ ಉಲ್ಲೇಖಿಸಲಾದ ‘ಭಾರ್ಗವಸ್ತ್ರ’ದ ಹೆಸರನ್ನು ಮಹರ್ಷಿ ಭಾರ್ಗವ ಪರಶುರಾಮರ ಹೆಸರಿಡಲಾಗಿದೆ. ಈಗ, ಈ ಹೆಸರಿನಿಂದ ಸ್ಫೂರ್ತಿ ಪಡೆದು, ಭಾರತವು ಒಂದು ಅತ್ಯಾಧುನಿಕ ಸೂಕ್ಷ್ಮ-ಕ್ಷಿಪಣಿ ತಂತ್ರಜ್ಞಾನವನ್ನು ಆಧರಿಸಿದ ಡ್ರೋನ ವಿರೋಧಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಮಹಾಭಾರತದಲ್ಲಿ ಉಲ್ಲೇಖಿಸಲಾದ ಮಹರ್ಷಿ ಭಾರ್ಗವ ಪರಶುರಾಮರ ಭಾರ್ಗವಾಸ್ತ್ರ !
ಡ್ರೋನ್ ವಿರೋಧಿ ವ್ಯವಸ್ಥೆಯನ್ನು `ಸೋಲಾರ ಗ್ರೂಪ’ ಮತ್ತು `ಎಕನಾಮಿಕ ಎಕ್ಸ್ಪ್ಲೋಸಿವ್ಸ ಲಿಮಿಟೆಡ’ ಇವರು ಅಭಿವೃದ್ಧಿಪಡಿಸಿದೆ. ಇದು ಸೂಕ್ಷ್ಮ ಕ್ಷಿಪಣಿ ತಂತ್ರಜ್ಞಾನವನ್ನು ಆಧರಿಸಿದ್ದು, ಶತ್ರುಗಳ ಡ್ರೋನ್‌ಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಒಟ್ಟಿಗೆ ಹಾರುವ ಡ್ರೋನ್‌ಗಳನ್ನು ಪತ್ತೆ ಮಾಡಿ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವ್ಯವಸ್ಥೆಯು 6 ಕಿಲೋಮೀಟರ್ ದೂರದಿಂದ ಸಣ್ಣ ಡ್ರೋನ್‌ಗಳನ್ನು ಸಹ ಪತ್ತೆ ಮಾಡಬಲ್ಲದು ಮತ್ತು 64 ಕ್ಕೂ ಹೆಚ್ಚು ಸೂಕ್ಷ್ಮ ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಅದರ ನಿಖರತೆ ಮತ್ತು ಕಡಿಮೆ ವೆಚ್ಚ. ಇದರಿಂದ ದೊಡ್ಡ ಪ್ರಮಾಣದಲ್ಲಿ ಆಗುವ ಡ್ರೋನ್ ದಾಳಿಗಳನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ವ್ಯವಸ್ಥೆಯು ಮೊಬೈಲ್ ತಂತ್ರಜ್ಞಾನವನ್ನು ಆಧರಿಸಿದೆ, ಇದು ಯಾವುದೇ ಭೂಪ್ರದೇಶದಲ್ಲಿ, 5 ಸಾವಿರ ಮೀಟರ್ ಎತ್ತರದಲ್ಲಿಯೂ ಸಹ ನಿಯೋಜಿಸಲು ಸಕ್ಷಮವಾಗಿದೆ.
ಭಾರತದ ‘ಆಯರ್ನ ಡೋಮ’ದತ್ತ ಮೊದಲ ಹೆಜ್ಜೆ !
‘ಐರನ್ ಡೋಮ್’ ಇದು ಇಸ್ರೇಲ್‌ನ ಪ್ರಸಿದ್ಧ ರಕ್ಷಣಾ ವ್ಯವಸ್ಥೆಯಾಗಿದೆ ಅನೇಕ ರಕ್ಷಣಾ ತಜ್ಞರು ಈ ಹೊಸ ವ್ಯವಸ್ಥೆಯನ್ನು ಭಾರತದ ‘ಆಯರ್ನ ಡೋಮ’ ದತ್ತ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸುತ್ತಿದ್ದಾರೆ. ‘ಐರನ್ ಡೋಮ್’ ಇಸ್ರೇಲ್‌ನ ಪ್ರಸಿದ್ಧ ರಕ್ಷಣಾ ವ್ಯವಸ್ಥೆಯಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭಾರ್ಗವಾಸ್ತ್ರವನ್ನು ಸಹ ಅದೇ ರೀತಿಯಲ್ಲಿ ಭೂಮಿಯ ಮೇಲೆ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ, ಇದು ಭವಿಷ್ಯದಲ್ಲಿ ದೇಶದ ಗಡಿ ಭದ್ರತೆಯನ್ನು ಅಭೇದ್ಯವಾಗಿಸುವ ಭರವಸೆ ನೀಡುತ್ತದೆ. ಇಸ್ರೇಲ್‌ನ ‘ಐರನ್ ಡೋಮ್’ ಸ್ವತ್ತುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಭಾರ್ಗವಾಸ್ತ್ರವನ್ನು ಸಹ ಅದೇ ಶ್ರೇಣಿಯಲ್ಲಿ ನೋಡಲಾಗುತ್ತಿದೆ.