ಜಳಗಾಂವ್ – ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ಹೋಗುತ್ತಿದ್ದ ತಾಪ್ತಿಗಂಗಾ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ರೈಲಿನ ಕಿಟಕಿಯ ಗಾಜು ಒಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ರೈಲು ಮಹಾಕುಂಭಮೇಳಕ್ಕಾಗಿ ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿತ್ತು. ರೈಲು ಜಳಗಾಂವ್ ತಲುಪುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೈಲ್ವೇ ರಕ್ಷಣಾ ಪಡೆ ಪೊಲೀಸ್ ಇನ್ಸ್‌ಪೆಕ್ಟರ್ ಜ್ಞಾನೇಶ್ವರ ಪಾಟೀಲ್ ಅವರು, ಕಿಡಿಗೇಡಿ ವ್ಯಕ್ತಿಯೊಬ್ಬ ರೈಲಿಗೆ ಕಲ್ಲು ಎಸೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. (ಮಹಾಕುಂಭಮೇಳಕ್ಕೆ ಹೋಗುವ ರೈಲಿನ ಮೇಲೆ ಕಲ್ಲು ಎಸೆಯುವುದು ಹೇಗೆ ಕಿಡಿಗೇಡಿತವವಾಗುತ್ತದೆ ? ಪೊಲೀಸರಿಗೆ ಇದು ಅರ್ಥವಾಗುವುದಿಲ್ಲವೇ ? ಪೊಲೀಸರು ಇಂತಹ ಹೇಳಿಕೆಗಳನ್ನು ನೀಡುವುದು ಕಲ್ಲು ಎಸೆಯುವವರನ್ನು ಬೆಂಬಲಿಸಿದಂತೆ ! – ಸಂಪಾದಕರು) ಸಂಬಂಧಪಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಯಾಣಿಕರು ರೈಲ್ವೆ ಸಚಿವರು ಮತ್ತು ಮುಖ್ಯಮಂತ್ರಿಗಳಿಂದ ಭದ್ರತೆಯನ್ನು ಕೋರಿದ್ದಾರೆ.
Stone Pelting on Tapti-Ganga Express En Route to Mahakumbh Mela in Jalgaon
File charges of culpable homicide and take strict action! — @HinduJagrutiOrg
– It is to be noted that it is only during Hindu festivals that Hindus, their vehicles, and trains are subjected to attacks.… pic.twitter.com/ykMlT55RSS
— Sanatan Prabhat (@SanatanPrabhat) January 13, 2025
ಸಂಪಾದಕೀಯ ನಿಲುವು
|