ನವ ದೆಹಲಿ – ‘ಪೂಜಾ ಸ್ಥಳ ಕಾನೂನು, 1991’ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ 6 ಅರ್ಜಿಗಳ ಮೇಲೆ ಮುಂದಿನ ಡಿಸೆಂಬರ್ 12ರಂದು ವಿಚಾರಣೆ ನಡೆಯಲಿದೆ. ಡಾ. ಸುಬ್ರಹ್ಮಣ್ಯಮ್ ಸ್ವಾಮಿ, ಕಥಾವಾಚಕ ದೇವಕೀನಂದನ್ ಠಾಕೂರ್, ನ್ಯಾಯವಾದಿ ಶ್ರೀ. ಆಶ್ವಿನಿ ಉಪಾಧ್ಯಾಯ, ನ್ಯಾಯವಾದಿ ವಿಷ್ಣು ಶಂಕರ ಜೈನ್ ಮುಂತಾದವರು ಈ ಅರ್ಜಿಗಳನ್ನು ದಾಖಲಿಸಿದ್ದಾರೆ. ಆಗಸ್ಟ್ 15, 1947ರಂದು ದೇಶದಲ್ಲಿ ಇರುವ ಎಲ್ಲ ಪೂಜಾ ಸ್ಥಳಗಳನ್ನು ಹಾಗೆಯೇ ಇಡಬೇಕು ಎಂದು ಈ ಕಾನೂನಿನಲ್ಲಿ ಹೇಳಲಾಗಿದೆ. ಕೇವಲ ಅಯೋಧ್ಯೆಯ ಬಾಬ್ರಿ ವಿವಾದವನ್ನು ಹೊರತುಪಡಿಸಲಾಗಿತ್ತು.
ಈ ಅರ್ಜಿಗಳ ವಿರುದ್ಧ ಜಮಿಯತ್ ಉಲೆಮಾ-ಎ-ಹಿಂದ್ ಅವರು ಅರ್ಜಿ ಸಲ್ಲಿಸಿದ್ದಾರೆ. ಜಮಿಯತ್, ಈ ಕಾನೂನಿಗೆ ವಿರುದ್ಧವಾದ ಅರ್ಜಿಗಳ ವಿಚಾರಣೆ ಮಾಡಿದರೆ ದೇಶಾದ್ಯಾಂತ ಮಸೀದಿಗಳ ವಿರುದ್ಧದ ದಾವೆಗಳ ಪ್ರವಾಹ ಉಂಟಾಗುತ್ತದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿಯ ಉಸ್ತುವಾರಿ ನೋಡಿಕೊಳ್ಳುವ ಅಂಜುಮನ್ ವ್ಯವಸ್ಥೆ ಮಸೀದಿ ಆಡಳಿತ ಸಮಿತಿಯು ಈ ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಕೋರಿದ್ದಾರೆ.