ಇತ್ತೆಹಾದ್- ಎ-ಮಿಲ್ಲತ್ ಕೌನ್ಸಿಲ್ ನ ಅಧ್ಯಕ್ಷ ಮೌಲಾನಾ ತೌಕಿರ ರಝಾ ಅವರಿಂದ ಮುಸಲ್ಮಾನರಿಗೆ ಕರೆ
ಮುಂಬಯಿ – ದೇಶದಲ್ಲಿ ‘ಮುಸ್ಲಿಂ ಸೆಂಟ್ರಲ್ ಬೋರ್ಡ್’ ಸ್ಥಾಪನೆ ಆಗಬೇಕು, ಅದರಲ್ಲಿ ತ್ಯಾಗದ ಮನೋವೃತ್ತಿ ಹೊಂದಿರುವವರನ್ನು ಸೇರಿಸಬೇಕು. ಈ ಬೋರ್ಡಿನ ನಿರ್ಣಯವನ್ನು ಎಲ್ಲಾ ಮುಸಲ್ಮಾನರು ಕಣ್ಣು ಮುಚ್ಚಿ ಸ್ವೀಕರಿಸಬೇಕು, ಎಂದು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ನ ಅಧ್ಯಕ್ಷ ಮೌಲಾನ ತೌಕೆರ್ ರಝಾ ಅವರು ಒಂದು ಕಾರ್ಯಕ್ರಮದಲ್ಲಿ ಆಗ್ರಹಿಸಿದರು. ಈ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಬು ಆಝಮಿ ಅಲ್ಲದೇ ಅನೇಕ ನಾಯಕರು ಮತ್ತು ಮುಸಲ್ಮಾನ ಧರ್ಮಗುರುಗಳು ಉಪಸ್ಥಿತರಿದ್ದರು. ‘ಮುಸ್ಲಿಂ ಲೀಡರ್ಷಿಪ್ ಸಮಿಟ್ 2024’ ಎಂಬ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮೌಲಾನಾ ಖಲೀಲುರು ರಹಮಾನ್ ಸಜ್ಜಾದ್ ನೋಮಾನಿ ನದವಿ ಸ್ವೀಕರಿಸಿದ್ದರು. ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು.
ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ಮಾಡಲಾಗುತ್ತಿದೆ !
ತೌಕಿರ ರಝಾ ಅವರು ಮಾತು ಮುಂದುವರೆಸಿ, ಮುಸಲ್ಮಾನರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಚಿಂತಿಸಬೇಕು. ಮುಸಲ್ಮಾನರಿಗೆ ಎರಡನೇ ದರ್ಜೆಯ ನಾಗರೀಕರನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ದೇಶದಲ್ಲಿನ ಮುಸಲ್ಮಾನರಿಗೆ ಗೌರವ ಮತ್ತು ಪ್ರತಿಷ್ಠೆ ಇಲ್ಲ, ಇದರಿಂದ ಅವರು ದುಃಖಿತರಾಗಿದ್ದಾರೆ. ಮುಸಲ್ಮಾನರ ಮೇಲೆ ಲವ್ ಜಿಹಾದಾದ ಆರೋಪ ಹೋರಿಸಲಾಗುತ್ತಿದೆ, ಇದೂ ಕೂಡ ಅವರಿಗೆ ಬೇಸರ ತಂದಿದೆ ಮತ್ತು ಈ ದೇಶವು ಜವಾಬ್ದಾರಿ ಶೂನ್ಯ ಜನರ ಕೈಯಲ್ಲಿರುವುದು ಎಲ್ಲಕ್ಕಿಂತ ಹೆಚ್ಚು ಖೇದಕರವಾಗಿದೆ ಎಂದರು.
ಸಂಪಾದಕೀಯ ನಿಲುವು
|
ರಝಾ ಅವರು ಮೊದಲು ಮುಸಲ್ಮಾನರ ಮನೆಗೆ ಹೋಗಿ ನೋಡಲಿ: ಶಿಯಾ ಧರ್ಮಗುರುಗಳ ಸಲಹೆ !
ಶಿಯಾ (ಮುಸಲ್ಮಾನರಲ್ಲಿನ ಒಂದು ಸಂಪ್ರದಾಯ) ಧರ್ಮಗುರು ಸೈಫ್ ಅಬ್ಬಾಸ್ ಅವರು ತೌಕೀರ್ ರಝಾ ಅವರ ಹೇಳಿಕೆಯನ್ನು ಟೀಕಿಸುತ್ತಾ, ಅವರು ಹೇಳುತ್ತಿರುವುದು ಸರಿಯಾಗಿಯೇ ಇದೆ; ಆದರೆ ಮೊದಲು ಅವರು ಸ್ವತಃ ಮುಂದೆ ಬರಬೇಕು ಮತ್ತು ಪ್ರತಿಯೊಬ್ಬ ಮುಸಲ್ಮಾನರ ಮನೆಗೆ ಹೋಗಬೇಕು ಆನಂತರವೇ ಮಾತನಾಡಬೇಕು. ಈಗ ಮುಸಲ್ಮಾನರಿಗೆ ಒಬ್ಬ ನಾಯಕನಿಲ್ಲ ಮತ್ತು ಕೇವಲ ಒಬ್ಬನೇ ನಾಯಕ ಇರಲು ಸಾಧ್ಯವಿಲ್ಲ ಎಂಬುದು ನಿಜ. ‘ಲವ್ ಜಿಹಾದ್’ ಎಂಬುದು ಎಲ್ಲಿಯೂ ಇಲ್ಲ ಎಂದವರು ಅಲ್ಲಗಳೆದರು. (ಹಾಗಾದರೆ ಮುಸಲ್ಮಾನ ಯುವಕರು ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ಸ್ವಂತದ ನಿಜವಾದ ಹೆಸರು ಮರೆಮಾಚಿ ಹಿಂದೂ ಹೆಸರನ್ನು ಏಕೆ ಹೇಳುತ್ತಾರೆ? ಹಿಂದೂ ಯುವತಿಯರ ಮತಾಂತರ ಏಕೆ ಮಾಡುತ್ತಾರೆ? ಆಕೆಯ ಜೊತೆಗೆ ಬಲವಂತವಾಗಿ ವಿವಾಹ ಏಕೆ ಮಾಡಿಕೊಳ್ಳುತ್ತಾರೆ? ಇಂತಹ ಪ್ರಶ್ನೆಗಳಿಗೆ ಅಬ್ಬಾಸ್ ಮೌನ ತಾಳುತ್ತಾರೆ ಏಕೆ? ಇಂತಹ ಕೃತ್ಯಗಳನ್ನು ಮಾಡುವ ಮುಸಲ್ಮಾನ ಯುವಕರನ್ನು ಅವರು ಏಕೆ ತಡೆಯುವುದಿಲ್ಲ? – ಸಂಪಾದಕರು )
ಇಸ್ಲಾಮಿಕ್ ರಾಷ್ಟ್ರ ನಂಬುವವರಿಗೆ ಸಂವಿಧಾನದ ಚೌಕಟ್ಟಿನಲ್ಲಿರಲು ಕಲಿಸಲಾಗುವುದು ! – ಭಾಜಪ ಎಚ್ಚರಿಕೆ
ಭಾರತವನ್ನು ‘ಇಸ್ಲಾಮಿಕ್ ರಾಷ್ಟ್ರ’ ಎಂದು ನಂಬುವವರಿಗೆ ಸಂವಿಧಾನದ ಚೌಕಟ್ಟಿನಲ್ಲಿರುವಂತೆ ಕಲಿಸಲಾಗುವುದು. ದೇಶದಲ್ಲಿನ ಮುಸಲ್ಮಾನರಿಗೆ ಪ್ರಚೋದಿಸುವ ತೌಕೀರ ರಝಾ ಅವರೇ ದೊಡ್ಡ ಜವಾಬ್ದಾರಿ ಶೂನ್ಯ ವ್ಯಕ್ತಿಯಾಗಿದ್ದಾರೆ. ಇಂತವರ ವಿರುದ್ಧ ಸಂವಿಧಾನದ ಮಿತಿಯಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೇಮ್ ಶುಕ್ಲಾ ಎಚ್ಚರಿಸಿದರು.
ತೌಕಿರ್ ರಝಾ ಅವರು ಈ ಹಿಂದೆ ನೀಡಿದ್ದ ಕೆಲ ಆಕ್ಷೇಪಾರ್ಹ ಹೇಳಿಕೆಗಳು :೧. ತೌಕಿರ್ ರಝಾ ಅವರು ಜ್ಞಾನವಾಪಿ ವಿಷಯದ ಕುರಿತು: ಅಯೋಧ್ಯಾ ಪ್ರಕರಣದಲ್ಲಿ ನಾವು ಎಲ್ಲಾ ಸುಳ್ಳು ದಾವೆಗಳನ್ನು ಸಹಿಸಿದೆವು; ಆದರೆ ಈಗ ಅದನ್ನು ಸಹಿಸಲಾಗದು. ಕಾರಂಜಿಗಳನ್ನು ಶಿವಲಿಂಗ ಎಂದು ನಂಬಿ ಕಾನೂನು ಮತ್ತು ಧರ್ಮದ ಗೇಲಿ ಮಾಡಲಾಗುತ್ತಿದೆ . ೨ .೨೦೨೨ರಲ್ಲಿ ನಡೆದ ಒಂದು ಸಭೆಯಲ್ಲಿ ರಝಾ ಎಚ್ಚರಿಕೆ ನೀಡುತ್ತಾ, ಯಾವಾಗ ಮುಸಲ್ಮಾನ ಯುವಕರು ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗುವರೋ ಆಗ ಹಿಂದುಗಳಿಗೆ ಅಡಗಿಕೊಳ್ಳಲು ಎಲ್ಲೂ ಜಾಗ ಸಿಗುವುದಿಲ್ಲ ಎಂದು ಹೇಳಿದ್ದರು. ೩.೨೦೦೭ರಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರ ವಿರುದ್ಧ ಫತ್ವಾ ಹೊರಡಿಸಿದ್ದ ರಝಾ, ಯಾರು ತಸ್ಲಿಮಾಳ ಶಿರಚ್ಛೇದ ಮಾಡುವರೋ ಅವರಿಗೆ ೫ ಲಕ್ಷ ರೂಪಾಯ ಬಹುಮಾನ ನೀಡಲಾಗುವುದೆಂದು ಘೋಷಿಸಿದ್ದರು.
|