೩೩ ಹಿರಿಯ ಪೊಲೀಸ ಅಧಿಕಾರಿಗಳ ಸಮಾವೇಶ
ಶ್ರೀನಗರ (ಜಮ್ಮು-ಕಾಶ್ಮೀರ) – ಚುನಾವಣೆ ಆಯೋಗದಿಂದ ಜಮ್ಮು-ಕಾಶ್ಮೀರದಲ್ಲಿನ ಚುನಾವಣೆಯ ದಿನಾಂಕ ಘೋಷಿಸಲಾಗಿದೆ. ಅದಕ್ಕೂ ಮುನ್ನ ಪೊಲೀಸ ಮತ್ತು ಸಾಮಾನ್ಯ ಸರಕಾರಿ ಇಲಾಖೆಯಲ್ಲಿನ ೨೦೦ ಕ್ಕೂ ಹೆಚ್ಚಿನ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ೧೫ ರಂದು ದಡರಾತ್ರಿ ಸಾಮಾನ್ಯ ಸರಕಾರಿ ಇಲಾಖೆಯ ೮೯ ಜನರನ್ನು ವರ್ಗಾಯಿಸುವ ಆದೇಶ ನೀಡಲಾಗಿದೆ. ಇದರಲ್ಲಿ ಪುಂಛ ಮತ್ತು ಬಾಂದೀಪೋರಾ ಜಿಲ್ಲೆಯ ಉಪಯುಕ್ತರು, ಸಚಿವರು, ಆಯುಕ್ತರು, ಮಹಾ ಸಂಚಾಲಕರು, ಆಡಳಿತ ಸಂಚಾಲಕರು ಮತ್ತು ಇದರ ಅನೇಕ ಇಲಾಖೆಯ ಸಂಚಾಲಕರ ಸಮಾವೇಶ ಇದೆ. ಈ ಪ್ರಕ್ರಿಯೆ ನಡೆಸುವ ಹಿಂದಿನ ಉದ್ದೇಶ ಯಾವುದೇ ಅಧಿಕಾರಿ ಅವರ ಗೃಹಜಿಲ್ಲೆಯಲ್ಲಿನ(ಸ್ವಂತ ಜಿಲ್ಲೆಯಲ್ಲಿನ) ಸ್ಥಾನದಲ್ಲಿ ಇರಬಾರದು. ಹಾಗೂ ಅವರು ಯಾವುದೇ ಒಂದು ಸ್ಥಾನದಲ್ಲಿ ೨ ವರ್ಷಕ್ಕಿಂತಲೂ ಹೆಚ್ಚಿನ ಕಾಲ ಕಳೆದಿರಬಾರದು ಎಂದಾಗಿದೆ.
ನಳಿನ ಪ್ರಭಾತ್ ಇವರನ್ನು ಜಮ್ಮು-ಕಾಶ್ಮೀರದ ವಿಶೇಷ ಪೊಲೀಸ್ ಮಹಾಸಂಚಾಲಕರಾಗಿ ನೇಮಿಸಲಾಗಿದೆ. ಈಗಿನ ಮಹಾಸಂಚಾಲಕರು ಆರ್.ಆರ್. ಸ್ವೆನ್ ಇವರು ಸಪ್ಟೆಂಬರ್ ೩೦ ರಂದು ಸೇವಾ ನಿವೃತ್ತರಾಗುವರು. ಅದರ ನಂತರ ಅಕ್ಟೋಬರ್ ೧ ರಂದು ಪ್ರಭಾತ್ ಇವರು ಹೊಸ ಪೊಲೀಸ ಮಹಾಸಂಚಾಲಕರೆಂದು ನೇಮಕಗೊಳ್ಳುವರು. ಇದರೊಂದಿಗೆ ಪೊಲೀಸ ಮಹಾನಿರೀಕ್ಷಕರು, ಉಪಮಹಾನಿರೀಕ್ಷಕರು, ಹಿರಿಯ ಪೊಲೀಸ ಅಧಿಕಾರಿಗಳು ಹೀಗೆ ೩೩ ಹಿರಿಯ ಪೊಲೀಸ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.