ಮದರಸಾ ಶಿಕ್ಷಕನಿಂದ ಅನಾಥ ವಿದ್ಯಾರ್ಥಿನಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಹಾಗೂ ಶಿಕ್ಷಕ ಪರಾರಿಯಾಗಲು ಮದರಸಾ ನಿರ್ದೇಶಕನಿಂದ ಸಹಾಯ !

  • ಶಾಮಲಿ (ಉತ್ತರ ಪ್ರದೇಶ) ಇಲ್ಲಿನ ಘಟನೆ

  • ವಿದ್ಯಾರ್ಥಿಗಳಿಂದ ಖಾಸಗಿ ಅಂಗದ ಮಸಾಜ ಮಾಡಿಸಿಕೊಳ್ಳುತ್ತಿದ್ದ !

ಶಾಮಲಿ (ಉತ್ತರ ಪ್ರದೇಶ) – ಜಿಲ್ಲೆಯ ಒಂದು ಮದರಸಾದಲ್ಲಿ ಕಲಿಸುವ ಮೌಲಾನಾ (ಇಸ್ಲಾಂ ಧರ್ಮದ ಅಭ್ಯಾಸಕ) ಚಾಂದ ಮಹಮದ ಚಿಕ್ಕ ಮಕ್ಕಳೊಂದಿಗೆ ಅನೈತಿಕವಾಗಿ ವರ್ತಿಸುತತಾನೆ ಎಂದು ಆರೋಪವಿದೆ. ಅವನು ಕೆಲವು ವಿದ್ಯಾರ್ಥಿಗಳಿಗೆ ತನ್ನ ಖಾಸಗಿ ಅಂಗದ ಮಾಲಿಶ ಮಾಡಲು ಹೇಳುತ್ತಿದ್ದನು ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಅವನು ಓರ್ವ ಅನಾಥ ವಿದ್ಯಾರ್ಥಿನಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಆರೋಪವಿದೆ. ಈ ಘಟನೆಯ ಬಳಿಕ ಮದರಸಾ ನಿರ್ದೇಶಕನ ಸಹಾಯದಿಂದ ಮೌಲಾನಾ ಪರಾರಿಯಾಗಿದ್ದಾನೆ. ಇನ್ನೊಂದೆಡೆ ಪೊಲೀಸರು ಈ ಘಟನೆಯು ಮಕ್ಕಳಲ್ಲಿ ಪರಸ್ಪರ ನಡೆದ ಜಗಳವಾಗಿದೆಯೆಂದು ಹೇಳುತ್ತಿದ್ದಾರೆ. (ಇಂತಹ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನಗಳು ಆಗುತ್ತಿಲ್ಲವಲ್ಲಾ, ಎಂದು ಉತ್ತರಪ್ರದೇಶದ ಭಾಜಪದ ಗೃಹಸಚಿವಾಲಯ ಪರಿಶೀಲಿಸಬೇಕು ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು)

1. ಜಿಲ್ಲೆಯ ಮುಮ್ತಾಜ್‌ನಗರ ಗುರಾನಾ ಗ್ರಾಮದಲ್ಲಿ ‘ಜಾಮಿಯಾ ಅರೇಬಿಯಾ ತಾಲಿಮುಲ್ ಕುರಾನ್’ ಹೆಸರಿನ ಮದರಸಾ ಇದೆ.

2. ಅಭ್ಯಾಸ ಮುಗಿದ ನಂತರ ಮದರಸಾ ಶಿಕ್ಷಕ ಮೌಲಾನಾ ಚಾಂದ ಮಹಮದ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸುತ್ತಿದ್ದನು. ಇಲ್ಲಿ ಅವನು ಮಕ್ಕಳಿಂದ ತನ್ನ ಖಾಸಗಿ ಅಂಗದ ಮಾಲೀಶ ಮಾಡಿಸಿಕೊಳ್ಳುತ್ತಿದ್ದನು. ಹಾಗೆಯೇ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದನು. ದುಷ್ಕೃತ್ಯ ಎಸಗಿದ ಬಳಿಕ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿ ಬಾಯಿ ಮುಚ್ಚಿಕೊಂಡಿರುವಂತೆ ಹೇಳುತ್ತಿದ್ದನು.

3. ಕೆಲ ವಿದ್ಯಾರ್ಥಿಗಳ ಪರಸ್ಪರ ಮಾತುಕತೆ ಮೂಲಕ ಈ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿತು. ಈ ಘಟನೆಯ ಬಗ್ಗೆ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದರಿಂದ ಮದರಸಾ ನಿರ್ದೇಶಕ ಇಸ್ರಾಯಿಲನು ಮೌಲಾನಾ ಚಾಂದ ಮಹಮದ ಪರಾರಿಯಾಗಲು ಸಹಾಯ ಮಾಡಿದನು.

4. ಈ ಬಗ್ಗೆ ಪೊಲೀಸ್ ಠಾಣೆಯ ಪ್ರಭಾರಿ ಪ್ರವೇಶ ಕುಮಾರ ಇವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪೊಲೀಸರಿಗೆ ಮೌಖಿಕ ದೂರು ಬಂದಿತ್ತು. ಈ ದೂರಿನ ತನಿಖೆಯನ್ನು ನಡೆಸಿದಾಗ ಮಕ್ಕಳ ನಡುವಿನ ಆಂತರಿಕ ಸಂಘರ್ಷದ ಪ್ರಕರಣವಾಗಿದೆಯೆಂದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

5. ಗ್ರಾಮಸ್ಥರ ಅಭಿಪ್ರಾಯ ಮಾತ್ರ ಪೊಲೀಸರ ಅಭಿಪ್ರಾಯಕ್ಕಿಂತ ಭಿನ್ನವಾಗಿವೆ. ಮದರಸಾ ನಿರ್ದೇಶಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

  • ಮದರಸಾಗಳಲ್ಲಿ ನಡೆಯುವ ಅನೈತಿಕತೆಯನ್ನು ನೋಡಿದರೆ ಅವರ ಮೇಲೆ ಶಾಶ್ವತವಾಗಿ ನಿಷೇಧ ಹೇರಬೇಕು !
  • ಇಂತಹ ಪ್ರಕರಣಗಳಲ್ಲಿ ಮೌಲಾನಾ ಮತ್ತು ಅವನನ್ನು ರಕ್ಷಿಸಿದ ಮದರಸಾ ನಿರ್ದೇಶಕನಿಗೆ ಶರಿಯತ ಅನುಸಾರ ಭೂಮಿಯಲ್ಲಿ ಸೊಂಟದವರೆಗೆ ಹುಗಿದು ಕಲ್ಲಿನಿಂದ ಚಚ್ಚಿ ಕೊಲ್ಲುವಂತೆ ಯಾರಾದರೂ ಕೋರಿದರೆ ಆಶ್ಚರ್ಯ ಪಡಬಾರದು !