Factory Blast: ಬೆಮೆತರಾ (ಛತ್ತೀಸ್‌ಗಢ) ನಲ್ಲಿರುವ ಗನ್‌ಪೌಡರ್ ಫ್ಯಾಕ್ಟರಿಯಲ್ಲಿ ಸ್ಫೋಟ : 17 ಸಾವು

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಬೆಮೆತರಾ (ಛತ್ತೀಸ್‌ಗಢ) – ಇಲ್ಲಿನ ಬೋರ್ಸಿ ಗ್ರಾಮದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದೆಂದು ವರದಿಯಾಗಿದೆ. ಕಾರ್ಖಾನೆಯಲ್ಲಿ 800ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಸ್ಫೋಟದಿಂದಾಗಿ ಕಾರ್ಖಾನೆಯ ಕೆಲವು ಭಾಗವು ಕುಸಿದಿದ್ದು ಅದರ ಅಡಿಯಲ್ಲಿ ಅನೇಕ ಜನರು ಹೂತುಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.