ದೇಶದ ಮೊದಲ ಪೌರಾಣಿಕ OTT ‘ಹರಿ ಓಂ’ ಪ್ರಾರಂಭವಾಗಲಿದೆ !

(ಟಿಪ್ಪಣೆ: OTT ಎಂದರೆ ‘ಓವರ್ ದಿ ಟಾಪ್ ‘ ಎಂದರ್ಥ. ಇದರ ಮೂಲಕ ಇಂಟರ್ನೆಟ್ ಬಳಸಿ ವಿವಿಧ ಕಾರ್ಯಕ್ರಮಗಳನ್ನು ನೇರವಾಗಿ ಜನರವರೆಗೆ ತಲುಪಿಸಲು ಸಾಧ್ಯವಾಗುತ್ತದೆ)

ನವ ದೆಹಲಿ – ‘ಉಲ್ಲು’ ಹೆಸರಿನ ಓಟಿಟಿ ಸಂಸ್ಥೆಯು ಭಾರತದಲ್ಲಿ ಮೊದಲ ಪೌರಾಣಿಕ ಓಟಿಟಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಉಲ್ಲು ಆಪ್ ಮುಖ್ಯಸ್ಥ ವಿಭು ಅಗರ್ವಾಲ್ ಅವರು ಮಾತನಾಡಿ, ಆಪ್ ಹೆಸರು ‘ಹರಿ ಓಂ’ ಆಗಿದ್ದು, ಅದು ಜೂನ್ 2024 ರಲ್ಲಿ ಕಾರ್ಯನಿರ್ವಹಿಸಲಿದೆಯೆಂದು ಹೇಳಿದ್ದಾರೆ. ಇದು 20ಕ್ಕೂ ಹೆಚ್ಚು ಪೌರಾಣಿಕ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಅಪ್ಲಿಕೇಶನ್ ಮೂಲಕ, ಆಡಿಯೋ ಮತ್ತು ವೀಡಿಯೋ ರೂಪದಲ್ಲಿ ಭಜನೆಗಳನ್ನು ನೋಡಲು ಮತ್ತು ಕೇಳಲು ಸಾಧ್ಯವಾಗಲಿದೆ.

‘ಉಲ್ಲು ಡಿಜಿಟಲ್’ ಸಂಸ್ಥೆ ತನ್ನ ‘ಐಪಿಒ’ ಆರಂಭಿಸುವ ಸಿದ್ಧತೆಯಲ್ಲಿದೆ ಎನ್ನುವ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ. ಇದಕ್ಕಾಗಿ, ಸಂಸ್ಥೆಯು ಅಗತ್ಯ ದಾಖಲೆಗಳನ್ನು ಮಾರುಕಟ್ಟೆ ನಿಯಂತ್ರಣ ಮಂಡಳಿಗೆ (SEBI) ಹಾಜರು ಪಡಿಸಿದೆ. ಈ ಮಾಧ್ಯಮದ ಮೂಲಕ ಸಂಸ್ಥೆ 135 ರಿಂದ 150 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬೇಕಾಗಿದೆ. ಸುಮಾರು 62.6 ಲಕ್ಷ ಹೊಸ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಮಾಹಿತಿಯು ಬಹಿರಂಗವಾಗಿದೆ.

ಐಪಿಒ ಎಂದರೆ ‘ಇನಿಶಿಯಲ್ ಪಬ್ಲಿಕ್ ಆಫರಿಂಗ್’ ಎಂದರೆ ಖಾಸಗಿ ಸಂಸ್ಥೆಯನ್ನು ಸಾರ್ವಜನಿಕ ಸಂಸ್ಥೆಯನ್ನಾಗಿ ಪರಿವರ್ತಿಸಲು ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಸಂಸ್ಥೆಯ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಶೇರುಗಳ ವಿತರಣೆಯಿಂದಾಗಿ, ಸಂಸ್ಥೆಗೆ ಬಂಡವಾಳ ದೊರೆಯುತ್ತದೆ ಮತ್ತು ಸಾಮಾನ್ಯ ಜನರು ಇಂತಹ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದರಿಂದ ಅವರಿಗೆ ಅವರು ಹೂಡಿರುವ ಬಂಡವಾಳದ ಮೇಲೆ ಲಾಭಾಂಶ ಸಿಗುತ್ತದೆ.