ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ನೋವಾಗಿದ್ದರೆ, ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ ! – ಗೃಹ ಸಚಿವ ಜಿ.ಪರಮೇಶ್ವರ

  • ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟೀಕರಣ

  • ವೈಯಕ್ತಿಕ ಕಾರಣಗಳಿಂದ ಕೊಲೆಯಾಗಿದೆ ಎಂದು ಪರಮೇಶ್ವರ ಹೇಳಿಕೆ ನೀಡಿದ್ದರು!

ಹುಬ್ಬಳ್ಳಿ – ಫೈಯಾಜ್ ಖೋಂಡುನಾಯಕ ಎಂಬ ಮುಸ್ಲಿಂ ಯುವಕ ನೇಹಾ ಹಿರೇಮಠ ಎಂಬವರ ಹತ್ಯೆ ಮಾಡಿದ್ದರಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವಾಗ, ಕಾಂಗ್ರೆಸ್ ಹಿಂದೂದ್ವೇಷದ ರಾಜಕಾರಣವನ್ನು ಮಾಡುವುದರಲ್ಲಿ ಮಗ್ನವಾಗಿದೆ. ನೇಹಾ ಕಾಂಗ್ರೆಸ್ಸಿನ ಮಹಾನಗರಪಾಲಿಕೆಯ ಸದಸ್ಯನ ಪುತ್ರಿಯಾಗಿದ್ದಾಳೆ. ಅವಳ ತಂದೆಯು ಈ ಘಟನೆಯು `ಲವ್ ಜಿಹಾದ’ ಆಗಿದೆಯೆಂದು ಆರೋಪಿಸಿದ್ದಾರೆ; ಆದರೆ ರಾಜ್ಯದ ಗೃಹಸಚಿವರಾದ ಮತ್ತು ಕಾಂಗ್ರೆಸ್ ನಾಯಕರಾದ ಜಿ. ಪರಮೇಶ್ವರ ಅವರು ಇದು ಲವ್ ಜಿಹಾದ ಅಲ್ಲವೆಂದು ಹೇಳುತ್ತಾ, ಈ ಹತ್ಯೆ ವೈಯಕ್ತಿಕ ಕಾರಣಗಳಿಂದ ಆಗಿದೆ ಎಂದು ಹೇಳಿದ್ದರು. ಇದರಿಂದ ನೇಹಾಳ ತಂದೆ –ತಾಯಿ ಮತ್ತು ಹುಬ್ಬಳ್ಳಿಯ ಮಹಿಳೆಯರು ಆಕ್ರೋಶಗೊಂಡಿದ್ದರು. ಈ ಬಗ್ಗೆ ಪರಮೇಶ್ವರ ಅವರು ಸ್ಪಷ್ಟೀಕರಣ ನೀಡುತ್ತಾ, ನನ್ನ ಹೇಳಿಕೆಯಿಂದ ನೇಹಾಳ ಪೋಷಕರಿಗೆ ದುಃಖವಾಗಿದ್ದರೆ ನಾನು ಖೇದ ವ್ಯಕ್ತಪಡಿಸುತ್ತೇನೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ನನ್ನ ಮನೆಗೆ ಘೇರಾವ್ ಹಾಕಿದ್ದರಿಂದ ಈ ಪ್ರಕರಣ ರಾಜಕೀಯವಾಗುತ್ತಿದೆ. ನಾನು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ. ನಾವು ಸುಮ್ಮನೆ ಹೇಳಿಕೆ ನೀಡುವುದಿಲ್ಲ. ನನಗೆ ಸಿಕ್ಕ ಮಾಹಿತಿಯ ಆಧಾರದಿಂದ ನಾನು ಹೇಳಿಕೆ ನೀಡಿದ್ದೇನೆ. ಹತ್ಯೆಯ ತನಿಖೆ ಮುಂದುವರಿದಿದ್ದು, ಅದು ಮುಗಿದ ಬಳಿಕ ಸತ್ಯ-ಸುಳ್ಳು ಹೊರಬೀಳಲಿದೆ ಎಂದವರು ಹೇಳಿದರು.

ಸಂಪಾದಕೀಯ ನಿಲುವು

ಜಿ. ಪರಮೇಶ್ವರ ಮತ್ತು ಕಾಂಗ್ರೆಸ್ಸಿನ ಅವರ ಸಹೋದ್ಯೋಗಿಗಳಿಗೆ ಹಿಂದೂಗಳ ದುಃಖಕ್ಕೆ ಯಾವುದೇ ಸಂಬಂಧವಿಲ್ಲಯೆನ್ನುವುದೇ ಸತ್ಯವಾಗಿದೆ. ಈಗ ಕೇವಲ ಚುನಾವಣೆಯ ಮೇಲೆ ಈ ಘಟನೆ ಪರಿಣಾಮಬೀರಬಾದೆಂದೇ ಪರಮೇಶ್ವರ ಈ ರೀತಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ, ಹಿಂದೂಗಳು ಬುದ್ಧಿವಂತರಿದ್ದಾರೆ. ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು!