ಬೆಂಗಳೂರು – ಗದಗ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಪ್ರಕಾಶ್ ಬಾಕಳೆ ಇವರ ಮನೆಗೆ ನುಗ್ಗಿದ ಹಂತಕರು ಆತನ ಪುತ್ರ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮೃತರಲ್ಲಿ ಪ್ರಕಾಶ ಬಾಕಳೆ, ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ ಹಾದಿಮನಿ (55), ಲಕ್ಷ್ಮಿ ಹಾದಿಮನಿ (45) ಮತ್ತು ಆಕಾಂಕ್ಷಾ ಹಾದಿಮನಿ (16) ಸೇರಿದ್ದಾರೆ. ಕಾರ್ತಿಕ್ ನ ಮದುವೆ ಸಿದ್ಧತೆಗಾಗಿ ಹಾದಿಮನಿ ಕುಟುಂಬದವರು ಪ್ರಕಾಶ ಬಾಕಳೆ ಮನೆಗೆ ಬಂದಿದ್ದರು. ಹಾದಿಮನಿ ಕುಟುಂಬದವರು ಬಾಕಳೆ ಕುಟುಂಬದ ಸಂಬಂಧಿಗಳಾಗಿದ್ದರು.
(ಸೌಜನ್ಯ – News18 Kannada)
1. ಪ್ರಕಾಶ ಬಾಕಳೆ ಅವರ ಪತ್ನಿ ಸುನಂದಾ ಬಾಕಳೆ ಗದಗ-ಬೆಟಗೇರಿ ಪುರಸಭೆ ಉಪಾಧ್ಯಕ್ಷೆ ಆಗಿದ್ದಾರೆ.
2. ಮಾಧ್ಯಮ ವರದಿಗಳ ಪ್ರಕಾರ, ಗದಗ ಜಿಲ್ಲೆಯ ಗದಗ-ಬೆಟಗೇರಿ ಪುರಸಭೆಯ ದಸರಾ ಓಣಿಯಲ್ಲಿನ ಪ್ರಕಾಶ ಬಾಕಳೆ ಎಂಬುವವರ ಮನೆಯ ಮೇಲೆ ಏಪ್ರಿಲ್ 18 ರ ರಾತ್ರಿ ಹಂತಕರು ದಾಳಿ ನಡೆಸಿ 4 ಜನರನ್ನು ಕೊಂದಿದ್ದಾರೆ.
3. ನಂತರ ಹಂತಕರು ಪ್ರಕಾಶ್ ಬಾಕಳೆ ಮತ್ತು ಸುನಂದಾ ಬಾಕಳೆ ಅವರ ಕೊಠಡಿಯ ಬಾಗಿಲು ತೆರೆಯಲು ಪ್ರಯತ್ನಿಸಿದರು; ಆದರೆ ಅವರು ಯಶಸ್ವಿಯಾಗಲಿಲ್ಲ. ಪ್ರಕಾಶ ಬಾಕಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಹಂತಕರು ಪರಾರಿಯಾಗಿದ್ದಾರೆ.
4. ಈ ಭೀಕರ ಹತ್ಯಾಕಾಂಡದ ನಂತರ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಳೆದ 24 ಗಂಟೆಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಹಲವು ಕೊಲೆ ಘಟನೆಗಳು ನಡೆದಿವೆ.
5. ಕರ್ನಾಟಕ ಪೊಲೀಸರು ನಾಲ್ವರ ಹಂತಕರನ್ನು ಇನ್ನೂ ಪತ್ತೆ ಹಚ್ಚಿಲ್ಲ. (ಕಾಂಗ್ರೆಸ್ ರಾಜ್ಯದಲ್ಲಿ ಪೊಲೀಸರೂ ನಿಷ್ಕ್ರಿಯರಾಗಿದ್ದರೆ ಆಶ್ಚರ್ಯವಿಲ್ಲ ! – ಸಂಪಾದಕರು)