ಕಾಶ್ಮೀರ: ಅನಂತನಾಗ್‌ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಈಗಲೂ ಹಿಂದೂಗಳು ಅಸುರಕ್ಷಿತ!

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹಾರ ಪ್ರದೇಶದ ಜಬಲಿಪೋರಾದಲ್ಲಿ ಏಪ್ರಿಲ್ 17 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಬೀದಿ ಬದಿ ವ್ಯಾಪಾರ ನಡೆಸುವ ಶಂಕರ್ ಶಾ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಶಾ ಗಂಭೀರವಾಗಿ ಗಾಯಗೊಂಡಿದ್ದನು. ಅವನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವನು ಮೃತಪಟ್ಟಿದ್ದಾನೆ ಎಂದು ಪ್ರಕಟಿಸಿದರು.

ಶಂಕರ್ ಮೂಲತಃ ಬಿಹಾರದವನು. ಈ ಹತ್ಯೆಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಇನ್ನೂ ವಹಿಸಿಕೊಂಡಿಲ್ಲ. ಇದಕ್ಕೂ ಮುನ್ನ ಏಪ್ರಿಲ್ 8 ರಂದು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ದೆಹಲಿಯ ಟ್ಯಾಕ್ಸಿ ಚಾಲಕ ಪರಮಜಿತ್ ಸಿಂಗ್ ಎಂಬವನ ಮೇಲೆ ಗುಂಡಿನ ದಾಳಿ ನಡೆಸಿದ್ದರು.