ಪುದುಚೇರಿ ವಿಶ್ವವಿದ್ಯಾಲಯದ ನಾಟಕದಿಂದ ಸೀತೆ ಮತ್ತು ಹನುಮಂತನ ಅವಹೇಳನ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪೊಲೀಸರಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹ

ಪುದುಚೇರಿ – ಇಲ್ಲಿಯ ಪುದುಚೇರಿ ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಎಝಿನಿ’ಯಲ್ಲಿ ‘ಸೋಮಾಯನಮ’ ಈ ನಾಟಕವನ್ನು ಪ್ರಸ್ತುತಪಡಿಸಲಾಯಿತು. ಈ ನಾಟಕದಲ್ಲಿನ ರಾಮಾಯಣದ ಪಾತ್ರಗಳನ್ನು ವಿಕೃತ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ. ವಿಶ್ವವಿದ್ಯಾಲಯದ ಭಾಜಪ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ‘ಸೋಮಾಯನಮ್ ’ ನಾಟಕದ ನಿರ್ದೇಶಕರು ಮತ್ತು ಇತರ ಕಲಾವಿದರ ವಿರುದ್ಧ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿ ವಿಶ್ವವಿದ್ಯಾಲಯದ ಕೆಲವರಿಂದ ಧಾರ್ಮಿಕ ಭಾವನೆ, ಸಾಂಸ್ಕೃತಿಕವಾಗಿ ಸೂಕ್ಷ್ಮವಾಗಿರುವ ವಿಷಯಗಳ ವಿಡಂಬನೆ ಮಾಡಲಾಗುತ್ತದೆ ಎಂದು ‘ಅಭಾವಿಪ’ ವಿದ್ಯಾರ್ಥಿಗಳ ಹೇಳಿಕೆಯಾಗಿದೆ.

ನಾಟಕದಲ್ಲಿ ಅವಮಾನಕಾರಿ ಘಟನೆ

1. ಸೀತೆಯ ಅಪಹರಣದ ಪ್ರಸಂಗದ ಮೊದಲು, ಸೀತೆ ರಾವಣನಿಗೆ ಗೋಮಾಂಸ ತಿನ್ನುವ ಬಗ್ಗೆ ಕೇಳುತ್ತಾಳೆ ಎಂದು ತೋರಿಸಲಾಗಿದೆ.

2. ಸೀತೆಯ ಅಗ್ನಿಪರೀಕ್ಷೆ ಅವಮಾನಕರವಾಗಿದೆಯೆನ್ನುವ ಸಂದೇಶವನ್ನು ನಾಟಕದ ಮೂಲಕ ನೀಡಿದ್ದಾರೆ.

3. ಈ ನಾಟಕದಲ್ಲಿ ಸೀತೆಯ ಕಥೆಯನ್ನು ಹೇಳಲು ನಾಟಕವು ‘ಗೀತಾ’ ಈ ಪಾತ್ರದ ವ್ಯಕ್ತಿತ್ವವನ್ನು ಬಳಸಲಾಗಿತ್ತು.

4. ಗೀತಾ ಹೆಸರಿನ ಈ ಪಾತ್ರ ರಾವಣನೊಂದಿಗೆ ಕುಣಿಯುತ್ತಿರುವಂತೆ ತೋರಿಸಲಾಗಿದೆ

5. ಸೀತೆ ರಾವಣನಿಗೆ, ನನಗೆ ಮದುವೆಯಾಗಿದೆ; ಆದರೆ ನೀವು ಸ್ನೇಹಿತರಾಗಬಹುದು ಎಂದು ಹೇಳುತ್ತಾಳೆ.

ಸಂಪಾದಕೀಯ ನಿಲುವು

ಈ ರೀತಿ ಹಿಂದೂಗಳ ದೇವರನ್ನು ಅವಮಾನಿಸುವ ದೇಶದಲ್ಲಿ ಕಠಿಣ ಶಿಕ್ಷೆಯಾಗದೇ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ಪರಿಸ್ಥಿತಿ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಸಾರುತ್ತದೆ !