೧೧ ಕೋಟಿ ರೂಪಾಯಿಯ ಶ್ರೀರಾಮಲಲ್ಲಾನ ಏಕೈಕ ಅಧ್ಬುತ ಕಿರೀಟ !

ಅಯೋಧ್ಯೆ – ಹಿಂದೂಗಳಿಗೆ ಭಕ್ತಿಗಾಗಿ ದೊರೆತಿರುವ ಅದ್ವಿತೀಯ ಮತ್ತು ಅಲೌಕಿಕ ನಿಧಿ ಆಗಿದೆ. ಜನವರಿ ೨೨ ರಂದು ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಸಮಯದಲ್ಲಿ ಜಗತ್ತು ಈ ಸಾಕ್ಷಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿತು. ಎಂದರೆ , ಶ್ರೀರಾಮಲಲ್ಲಾನ ಮೂರ್ತಿ ಕೆತ್ತಿರುವ ಶಿಲ್ಪಿಯಂತೆ ಅವನ ಅಲಂಕಾರದ ಆಭರಣಗಳನ್ನು ತಯಾರಿಸುವವರಲ್ಲಿ ಕೂಡ ತಳಮಳ ಮತ್ತು ಭಾವವೂ ಇದೆ. ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಹಿಂದಿನ ದಿನದ ಸಂಜೆ ಶ್ರೀ ರಾಮಲಲ್ಲನಿಗಾಗಿ ಗುಜರಾತಿನ ಸೂರತದಿಂದ ೧೧ ಕೋಟಿ ರೂಪಾಯ ರತ್ನಖಚಿತ ಸುವರ್ಣ ಕಿರೀಟ ಕಳುಹಿಸಿದರು. ಅದನ್ನು ನೋಡುತ್ತಲೇ ಇರಬೇಕು, ಅಂತಹ ಕಣ್ಣು ತುಂಬಿಕೊಳ್ಳುವಂತಹ ಕಿರೀಟವಾಗಿದೆ. ಭಕ್ತಿ ಮತ್ತು ಸೂಕ್ಷ್ಮ ಕೌಶಲ್ಯದ ಪ್ರತೀಕವಾಗಿರುವ ಈ ಉಡುಗೊರೆ ಸೂರತದ ‘ಗ್ರೀನ್ ಲ್ಯಾಬ್ ಡೈಮಂಡ್’ ಕಂಪನಿಯ ಮಾಲೀಕ ಮುಕೇಶ್ ಪಟೇಲ ಇವರು ಕಳುಹಿಸಿದ್ದರು.

ರತ್ನಖಚಿತ ಸುವರ್ಣ ಕಿರೀಟವನ್ನು ಅರ್ಪಣೆ ಮಾಡಿದ ಸೂರತದ ‘ಗ್ರೀನ್ ಲ್ಯಾಬ್ ಡೈಮಂಡ್’ ಕಂಪನಿಯ ಮಾಲೀಕ ಮುಕೇಶ್ ಪಟೇಲ

ಪಟೇಲ ಇವರು, ಯಾವ ಕ್ಷಣದಲ್ಲಿ ನಾನು ಪ್ರಭುವಿಗೆ ಆಭರಣ ಅರ್ಪಣೆ ಮಾಡುವ ಸಾಧ್ಯತೆಯ ಬಗ್ಗೆ ಯೋಚಿಸಿದೆ, ಆಗ ನನ್ನ ಭಾವಜಾಗೃತವಾಗಿ ಕಣ್ಣುಗಳು ತುಂಬಿ ಬಂದವು. ಆಗ ನನ್ನ ಮನಸ್ಸಿನಲ್ಲಿ ಒಂದೇ ವಿಚಾರ ಇತ್ತು. ಏನೇ ಮಾಡಿದರೆ ಅದು ದೈದಿಪ್ಯಮಾನವಾಗೀರಬೇಕು; ಕಾರಣ ರಾಜರ ರಾಜನಾಗಿರುವ ರಾಮಲಲ್ಲನ ಮಸ್ತಕದ ಮೇಲೆ ಅದು ವಿರಾಜಮಾನವಾಗುವುದು.’ ಇದು ಕೇವಲ ಒಂದು ಕಿರೀಟವಾಗಿರದೆ ಭಾರತದಲ್ಲಿನ ರಾಮ ಭಕ್ತರ ರಾಮನ ಕುರಿತಾದ ಶ್ರದ್ದೆ, ದೃಢವಾದ ವಿಶ್ವಾಸ ಮತ್ತು ನಿಸ್ವಾರ್ಥ ಭಕ್ತಿ ಇದರ ಸಾಕ್ಷಿ ಆಗಿದೆ. ಇದರಲ್ಲಿ ಲಕ್ಷಾಂತರ ಕನಸುಗಳು ಮತ್ತು ಆಸೆಗಳು ಒಟ್ಟಾಗಿ ಸೇರಿದೆ. ನಮ್ಮ ಇಬ್ಬರೂ ಕುಶಲ ಕಾರ್ಮಿಕರ ಕಾರ್ಯದಲ್ಲಿನ ಸಮರ್ಪಣೆಯ ಭಾವ ಕಾಣುತ್ತಿತ್ತು. ಆದ್ದರಿಂದ ಈ ಕಿರೀಟದ ಅಂತಿಮ ನೋಟ ಇದು ಕೇವಲ ನೋಡುವಂತಹದು, ಅಲ್ಲದೆ ನೋಡುತ್ತಲೇ ಇರಬೇಕು ಅಷ್ಟು ಸುಂದರವಾಗಿದೆ ಎಂದು ಹೇಳಿದರು.

ಅದ್ವಿತೀಯ ಇರುವಂತಹ ಈ ಭಗವಂತನ ಏಕೈಕ ಕಿರೀಟ !

ನಿವ್ವಳ ೧೧ ಕೋಟಿ ರೂಪಾಯಿ, ೬ ಕೆಜಿ ತೂಕದ ಮತ್ತು ೪.೫ ಕೆಜಿ ಶುದ್ಧ ಚಿನ್ನದ ಈ ಕಿರೀಟ ಅದ್ವಿತೀಯವಾಗಿದೆ. ಸೂಕ್ಷ್ಮ ಪುಷ್ಪಗಳ ಕುಸರೀ ಕೆಲಸ ಕೂಡ ಇದರಲ್ಲಿ ಮಾಡಿದ್ದಾರೆ. ವಿವಿಧ ಆಕಾರದ ವಜ್ರಗಳು, ಬಣ್ಣ ಬಣ್ಣದ ಮಾಣಿಕ್ಯಗಳು, ಮುತ್ತುಗಳು, ನೀಲ ಮಣಿ ಇವುಗಳಂತಹ ಅನೇಕ ಸುಂದರ ರತ್ನಗಳು ಇದರಲ್ಲಿ ಅಳವಡಿಸಿದ್ದಾರೆ. ಕಿರೀಟದ ಕಸೂತಿ ಹಿಂದಿನ ಅನೇಕ ರಾಜರು ಧರಿಸಿರುವ ಅಂತಹ ಸಾಂಪ್ರದಾಯಿಕ ಕಿರಿತದಂತೆ ಇದೆ.