ಪನವೇಲ( ರಾಯಗಡ ಜಿಲ್ಲೆ)- ರೈಲು ನಿಲ್ದಾಣ ಪ್ರದೇಶದಲ್ಲಿ ಭಗವಾ ಧ್ವಜ ಹಚ್ಚಲು ಧರ್ಮಾಂಧರ ತೀವ್ರ ವಿರೋಧ!

ಪನವೇಲ– ರೈಲ್ವೆ ನಿಲ್ದಾಣದ ಹೊರಗಿನ ಪ್ರದೇಶದಲ್ಲಿ ಭಗವಾ ಧ್ವನ ಹಚ್ಚಲು ಧರ್ಮಾಂಧ ಮುಸಲ್ಮಾನರು ಬೃಹತ ಪ್ರಮಾಣದಲ್ಲಿ ಹಿಂದೂಗಳನ್ನು ವಿರೋಧಿಸಿದರು. ಅದರ ವಿಡಿಯೋ ಜನೇವರಿ 21 ರಂದು ಎಲ್ಲೆಡೆ ಪ್ರಸಾರವಾ ಈ ಸಮಯದಲ್ಲಿ ಧರ್ಮಾಂಧ ಮುಸಲ್ಮಾನರು `’ಅಲ್ಲಾ ಹು ಅಕ್ಬರ್’ (ಅಲ್ಲಾ ಮಹಾನ್) ಮತ್ತು ‘ನಾರಾ-ಎ-ತಕಬೀರ’ (‘ಅಲ್ಲಾಹನಿಗಿಂತ ದೊಡ್ಡವರು ಯಾರೂ ಇಲ್ಲ’) ಎಂದು ದೊಡ್ಡ ಧ್ವನಿಯಲ್ಲಿ ದ್ವೇಷದಿಂದ ಘೋಷಣೆ ಕೂಗುತ್ತಿರುವ ವೀಡಿಯೊಗಳು ಕಂಡುಬರುತ್ತವೆ. ಆಗ ಅಲ್ಲಿದ್ದ ಪೊಲೀಸರು ಕೇವಲ ಶಿಳ್ಳೆ ಹೊಡೆಯುವುದು ಮತ್ತು ತಮ್ಮ ಹತ್ತಿರವಿರುವ ಕೋಲುಗಳಿಂದ ಗುಂಪನ್ನು ಚದುರಿಸುವುದನ್ನು ಬಿಟ್ಟು ಅದರಾಚೆಗೆ ಏನನ್ನೂ ಮಾಡುತ್ತಿರಲಿಲ್ಲ. ಈ ಸಮಯದಲ್ಲಿ ಅಲ್ಲಿ ಸಾಧಾರಣವಾಗಿ 7-8 ಪೊಲೀಸರು ಉಪಸ್ಥಿತರಿದ್ದರೆಂದು ಕಂಡು ಬರುತ್ತಿದೆ. ಈ ಸಮಯದಲ್ಲಿ ಒರ್ವ ಹಿಂದೂವಿಗೆ ಧರ್ಮಾಂಧನು ಕಾರಣವಿಲ್ಲದೇ ತಲೆಗೆ( ?) ಹೊಡೆದಿರುವುದು ಮತ್ತು ಮತ್ತೋರ್ವನ ಅಂಗಿಯನ್ನು ಎಳೆದಿರುವುದು ಕಂಡು ಬಂದಿದೆ.

ತದ ನಂತರ, ಹಿಂದೂ ವ್ಯಕ್ತಿ ಪರಾಗ ಬಾಲಡರೊಂದಿಗೆ ಮಾಜಿ ನಗರಸೇವಕ ಮುಕಿದ್ ಕಾಜಿ ಮತ್ತು ಪನವೇಲನ ಜಾಮಾ ಮಶೀದಿಗೆ ಸಂಬಂಧಿಸಿದವರೊಬ್ಬರು ಹೀಗೆ ಮೂವರು ಸೇರಿ ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ‘ಈ ರೀತಿ ಹರಿದಾಡುತ್ತಿರುವ ವಿಡಿಯೋ ಕೇವಲ ವದಂತಿಯಾಗಿದೆ. ನಾವು ಪೀಳಿಗೆಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಈ ರೀತಿ ಅಂತಹದ್ದೇನೂ ನಡೆದಿಲ್ಲ. ಏನು ನಡೆದಿದೆಯೋ, ಅದು ಸುಳ್ಳಾಗಿದೆ. ರಿಕ್ಷಾ ಚಾಲಕರ ಬಾಡಿಗೆ ದರದ ವಿಚಾರದಲ್ಲಿ ಜಗಳವಾಗಿತ್ತು. ಅದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ’ ಎಂದು ಹೇಳಿದ್ದಾರೆ. (ಮೊದಲ ವಿಡಿಯೋದಲ್ಲಿ ಭಗವಾ ಧ್ವಜ ಹಚ್ಚಲು ಹಿಂದೂ ಯುವಕರು ಬಂದಿದ್ದು ಮತ್ತು ಅವರನ್ನು ವಿರೋಧಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುವಾಗ, ರಿಕ್ಷಾ ಚಾಲಕರ ಸಂಬಂಧವನ್ನು ಜೋಡಿಸಿರುವುದು , ಕೇವಲ ವಿಷಯವನ್ನು ಮುಚ್ಚಿ ಹಾಕಲು ಮಾಡಿರುವ ಪ್ರಯತ್ನ ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ? – ಸಂಪಾದಕರು )

ಸಂಪಾದಕರು ನಿಲುವು

* ಗಲಭೆ ಸೃಷ್ಟಿಸಲು ಯತ್ನ

* ಧ್ವೇಷಯುಕ್ತ ಘೋಷಣೆಗಳನ್ನು ಕೂಗಿದರು

* ಪನವೇಲ ನಗರ ಮತ್ತು ಪ್ರದೇಶದಲ್ಲಿ ಧರ್ಮಾಂಧರ ಉದ್ಧಟತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೂಗಳು ಮತ್ತು ಹಿಂದುತ್ವನಿಷ್ಠರು ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಇದಕ್ಕಿಂತ ಮುಂದಿನ ಹೆಜ್ಜೆಯನ್ನು ಹಾಕಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಹೇಗೆ ನಂಬುವುದು?

* ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ, ಹಿಂದೂಗಳು ಭಗವಾ ಧ್ವಜವನ್ನು ಹಾರಿಸಲು ಸಾಧ್ಯವಾಗುವುದಿಲ್ಲ,ಇದಕ್ಕಿಂತ ದುರ್ದೈವ ಯಾವುದು? ಇದಕ್ಕಾಗಿ ಹಿಂದೂ ರಾಷ್ಟ್ರ ಅನಿವಾರ್ಯವಾಗಿದೆಯೆಂದು ಹಿಂದೂಗಳು ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ.