ನವ ದೆಹಲಿ – ಕೇಂದ್ರ ಆರೋಗ್ಯ ಸಚಿವ ಮನಸುಖ ಮಂಡಾವಿಯಾ ಇವರು ವಿವಿಧ ಆಸ್ಪತ್ರೆಯಲ್ಲಿನ ಅಂಕಿ ಅಂಶಗಳ ವರದಿ ನೀಡುತ್ತಾ, ದೇಶಾದ್ಯಂತ ವಾಯುಮಾಲಿನ್ಯ ಹೆಚ್ಚಿರುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಕರಣದಲ್ಲಿ ಹೆಚ್ಚಳವಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ಹವಾಮಾನ ಬದಲಾವಣೆ ಮತ್ತು ಮಾನವಿ ಆರೋಗ್ಯದ ಕುರಿತು ರಾಷ್ಟ್ರೀಯ ಕಾರ್ಯಕ್ರಮ ಆಯೋಜಿಸಿದ್ದೂ ಇದರ ಅಡಿಯಲ್ಲಿ ೧೮ ರಾಜ್ಯಗಳಲ್ಲಿನ ಸುಮಾರು ೮೦ ಆಸ್ಪತ್ರೆಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಮೇಲೆ ನಿರೀಕ್ಷೆ ಆರಂಭಿಸಿದ್ದಾರೆ.
ಮಂಡಾವಿಯಾ ಇವರು ರಾಜ್ಯಸಭೆಯಲ್ಲಿ ಮಾಹಿತಿ ನೀಡುವಾಗ, ಈ ನಿರೀಕ್ಷೆಯ ಉದ್ದೇಶ ವಿವಿಧ ನಗರಗಳಲ್ಲಿನ ಆಸ್ಪತ್ರೆಯಲ್ಲಿ ವಾಯುಗುಣಮಟ್ಟಕ್ಕೆ ಸಂಬಂಧಿತ ವರದಿಯಿಂದ ತೀವ್ರ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಕಡೆಗೆ ಗಮನ ನೀಡುವುದಾಗಿದೆ. ಅವರು ಮಾತು ಮುಂದುವರೆಸುತ್ತಾ, ‘ಎ.ಆರ್.ಐ. ಡಿಜಿಟಲ್ ನಿರೀಕ್ಷಣ ಡೇಟಾ’ ಆಗಸ್ಟ್ ೨೦೨೩ ರಲ್ಲಿ ಆರಂಭಿಸಲಾಗಿದೆ ಎಂದು ಹೇಳಿದರು.