ಶಬರಿಮಲೆ ದೇಗುಲದಲ್ಲಿ ಅಯ್ಯಪ್ಪನ ದರ್ಶನ ಪಡೆದ 57 ವರ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ !

ತಿರುವನಂತಪುರಂ (ಕೇರಳ) – ನರೇಂದ್ರ ಮೋದಿ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ 57 ವರ್ಷ ವಯಸ್ಸಿನ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ದೇವಾಲಯದ ನಿಯಮದ ಪ್ರಕಾರ ಕಪ್ಪು ಬಟ್ಟೆ ಧರಿಸಿ ಬರಿಗಾಲಿನಲ್ಲಿ ದೇವಾಲಯ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

2018 ರಲ್ಲಿ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದು ಬಾಕಿ ಇದ್ದಾಗ, ಶೋಭಾ ಕರಂದ್ಲಾಜೆ ಅವರು ದೇವಾಲಯದ ಆಚರಣೆಯಲ್ಲಿ ಬದಲಾವಣೆಯನ್ನು ವಿರೋಧಿಸುವ ಮಹಿಳೆಯರಿಗೆ ಬೆಂಬಲ ನೀಡಿದ್ದರು. ‘ಶಬರಿಮಲೈ ಹಿಂದೂಗಳ ಶ್ರದ್ಧೆಯ ವಿಷಯವಾಗಿದೆ, ಹಾಗಾಗಿ ಸಂಪ್ರದಾಯ ಪಾಲಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.

ಮಹಿಳೆಯರಿಗೆ ಸಂಬಂಧಿಸಿದಂತೆ ದೇವಾಲಯದ ಸಂಪ್ರದಾಯ !

ಶಬರಿಮಲೆಗೆ 10 ರಿಂದ 50 ವರ್ಷದೊಳಗಿನ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಪ್ರವೇಶಿಸುವುದನ್ನು ಸಾಂಪ್ರದಾಯಿಕವಾಗಿ ನಿಷೇಧಿಸಲಾಗಿದೆ. ಈ ವಯಸ್ಸಿನ ಮಿತಿಗಿಂತ ಕೆಳಗಿನ ಮತ್ತು ಹೆಚ್ಚಿನ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಬಹುದು. ಶೋಭಾ ಕರಂದ್ಲಾಜೆ ಅವರಿಗೆ 57 ವರ್ಷ ಇದೆ.