ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಇಂದು ವಿಚಾರಣೆ

ವಾರಾಣಸಿ – ಭಾರತೀಯ ಪುರಾತತ್ವ ಸಮೀಕ್ಷಾ ತಂಡವು (ಎ.ಎಸ್.ಐ. ಯು) ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿದೆ. ಇದರ ಬಗ್ಗೆ ನವಂಬರ್ ೧೭ ರಂದು ನಡೆಯುವ ವಿಚಾರಣೆ ನವಂಬರ್ ೧೮ ರಂದು ನಡೆಯುವುದು. ಪ್ರತ್ಯಕ್ಷದಲ್ಲಿ ಜ್ಞಾನವಾಪಿ ಪರಿಸರದಲ್ಲಿ ಸುಮಾರು ೩ ತಿಂಗಳು ನಡೆದಿರುವ ವೈಜ್ಞಾನಿಕ ಸಮೀಕ್ಷೆಯ ವರದಿ ಜಿಲ್ಲಾ ನ್ಯಾಯಾಧೀಶ ಡಾ. ಅಜಯ ಕೃಷ್ಣ ವಿಶ್ವೇಶ ಇವರ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುವುದಿತ್ತು. ಶೃಂಗಾರ ಗೌರಿ ಸಹಿತ ಮೂರ್ತಿಯ ಪೂಜೆ ಅಧಿಕಾರ ಕೇಳುವುದಕ್ಕಾಗಿ ದೆಹಲಿಯ ರಾಖಿ ಸಿಂಹ ಸಹಿತ ಇತರ ೫ ಮಹಿಳೆಯರ ಅರ್ಜಿಯ ಕುರಿತು ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಪರಿಸರದ ಸಮೀಕ್ಷೆಯ ಆದೇಶ ನೀಡಿತ್ತು. ಈ ಮಹಿಳೆಯರು, ಜ್ಞಾನವಾಪಿ ಪರಿಸರದಲ್ಲಿ ಹಿಂದಿನಿಂದ ಆದಿ ವಿಶ್ವೇಶ್ವರ, ಪಾರ್ವತಿ ಮಾತಾ, ಶೃಂಗಾರ ಗೌರಿ, ಶ್ರೀ ಹನುಮಂತ ಮುಂತಾದ ಮೂರ್ತಿಗಳಿವೆ. ಭೂತಕಾಲದಲ್ಲಿ ವಿದೇಶಿ ದಾಳಿಕೋರರಿಂದ ಹಾನಿ ಉಂಟಾಗಿದೆ ಮತ್ತು ಮಣ್ಣಿನ ರಾಶಿಯ ಅಡಿಯಲ್ಲಿ ಮುಚ್ಚಲಾಗಿದೆ. ಶೃಂಗಾರ ಗೌರಿ ಸಹಿತ ಕೆಲವು ಮೂರ್ತಿಗಳು ಸ್ಪಷ್ಟವಾಗಿ ಕಾಣುತ್ತವೆ; ಆದರೆ ಅದರ ಪೂಜೆ ಮಾಡುವುದಕ್ಕೆ ತಡೆಯಲಾಗುತ್ತಿದೆ. ಇತರ ಪಂಥದ ಜನರು ಅದಕ್ಕೆ ಹಾನಿ ಉಂಟು ಮಾಡಬಹುದು, ಹೀಗೂ ಕೂಡ ದಾವೆ ಮಾಡಲಾಗಿತ್ತು.