ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾಗೋರ್ ಗಿಲೋನ್ ಇವರಿಂದ ಭಾರತೀಯರಿಗೆ ಕರೆ !
ನವದೆಹಲಿ – ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಒಂದು ತಿಂಗಳು ಕಳೆದಿದೆ. ಹಮಾಸ್ 240 ಇಸ್ರೈಲೀ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಇಸ್ರೈಲ್ ರಾಯಭಾರಿ ನಾರ್ ಗಿಲ್ಲನ್ ಅವರು ದೀಪಾವಳಿಯ ಶುಭಾಶಯ ಕೋರುತ್ತಾ, ಈ ಒತ್ತೆಯಾಳುಗಳಿಗಾಗಿ ಒಂದು ಭರವಸೆಯ ದೀಪವನ್ನು ಬೆಳಗಿಸುವಂತೆ ಮನವಿ ಮಾಡಿದ್ದಾರೆ.
ಗಿಲಾನ್ ಇವರು ಟ್ವೀಟ್‌ನಲ್ಲಿ ಪ್ರಭು ಶ್ರೀರಾಮನು ಅಯೋಧ್ಯೆಗೆ ಹಿಂತಿರುಗಿದ ನೆನಪಿಗಾಗಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ನಮ್ಮ 240 ಒತ್ತೆಯಾಳುಗಳು ಒಂದು ತಿಂಗಳಿನಿಂದ ಹಮಾಸ್ ಭಯೋತ್ಪಾದಕರೊಂದಿಗೆ ಇದ್ದಾರೆ. ಅವರ ವಾಪಸಾತಿಗಾಗಿ ಒಂದು ದೀಪವನ್ನು ಬೆಳಗಿಸಿರಿ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿನ ಹಿಂದೂಗಳು ಖಂಡಿತವಾಗಿ ಇಸ್ರೇಲಿ ಒತ್ತೆಯಾಳುಗಳಿಗಾಗಿ ಅದನ್ನು ಮಾಡುವರು, ಇದರೊಂದಿಗೆ ಕಳೆದ 7 ದಶಕಗಳಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಾಗೆಯೇ ಕಾಶ್ಮೀರದಲ್ಲಿರುವ ಹಿಂದೂಗಳನ್ನು ರಕ್ಷಿಸಲು ಹಿಂದೂಗಳು ಪ್ರಯತ್ನಿಸುವುದು ಆವಶ್ಯಕವಾಗಿದೆ! |