Life Skills Course : ದೇಶಾದ್ಯಂತ ಕಾಲೇಜುಗಳಲ್ಲಿ ‘ಲೈಫ್ ಸ್ಕಿಲ್ಸ್ ಕೋರ್ಸ್’ ಪ್ರಾರಂಭ !

ಒತ್ತಡವನ್ನು ಎದುರಿಸುವುದು, ಮುಂದಾಳತ್ವ ಬೆಳವಣಿಗೆ, ನಿರ್ಣು ಕ್ಷಮತೆ ಇತ್ಯಾದಿಗಳನ್ನು ಕಲಿಸಲಾಗುವುದು !

ನವ ದೆಹಲಿ – ಈಗ ದೇಶಾದ್ಯಂತವಿರುವ ಎಲ್ಲಾ ಕಾಲೇಜುಗಳಲ್ಲಿ ಲೈಫ್ ಸ್ಕಿಲ್ಸ್ ಕೋರ್ಸ್ (ಜೀವನ ಕೌಶಲ್ಯ ಅಭ್ಯಾಸಕ್ರಮ) ಅನ್ನು ಪ್ರಾರಂಭಿಸಲಿದ್ದಾರೆ. ಈ ಅಭ್ಯಾಸ ಕ್ರಮ ಯಾವುದೇ ಪದವಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಇರಲಿದೆ. ‘ಸಾಮಾನ್ಯ ಪದವೀಧರರು ನಿರುದ್ಯೋಗವನ್ನು ಎದುರಿಸುತ್ತಾರೆ’ ಎಂದು ಆಗಾಗ್ಗೆ ಕಂಡು ಬರುತ್ತದೆ. ಅಂತಹ ಪದವೀಧರರ ಬಳಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಪದವೀಧರರಂತೆ ನೌಕರಿ ಪಡೆಯಲು ಅಗತ್ಯವಾದ ಕೌಶಲ್ಯಗಳು ಇರುವುದಿಲ್ಲ. ಈಗ ಮೇಲಿನ ಅಭ್ಯಾಸಕ್ರಮವನ್ನು ಕಲಿಸುವುದರಿಂದ ಅಂತಹ ವಿದ್ಯಾರ್ಥಿಗಳನ್ನು, ಅವರು ಓದುತ್ತಿರುವಾಗಲೇ ನೌಕರಿ ಪಡೆಯುವಂತೆ ಮಾಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಂವಾದ ಕೌಶಲ್ಯ, ಸಮಯ ನಿರ್ವಹಣೆ, ಯೋಗ್ಯ ದಿಶೆಯಲ್ಲಿ ಯೋಚಿಸುವ ಕೌಶಲ್ಯ, ನಿರ್ಣಯ ಕ್ಷಮತೆ, ಆರ್ಥಿಕ ನಿರ್ವಹಣೆ, ಒತ್ತಡವನ್ನು ಹೇಗೆ ಎದುರಿಸುವುದು ? ಇತ್ಯಾದಿ ಸೂತ್ರಗಳನ್ನು ಕಲಿಸಲಾಗುವುದು.

‘ಕಮ್ಯುನಿಕೆಶನ ಸ್ಕಿಲ್ಸ್’, ‘ಪ್ರೊಫೆಶನಲ್ ಸ್ಕಿಲ್ಸ್’, ‘ಲೀಡರಶಿಪ್-ಮ್ಯಾನೆಜಮೆಂಟ್-ಸ್ಕಿಲ್ಸ್’, ‘ಯುನಿವರ್ಸಲ್ ಯುಮನ್ ವ್ಯಾಲ್ಯೂಸ್’ ಮುಂತಾದ ವಿಷಯಗಳು ಈ ಅಭ್ಯಾಸ ಕ್ರಮದಲ್ಲಿ ಒಳಗೊಂಡಿರುತ್ತದೆ. ಇದರಲ್ಲಿ AI ನಂತಹ ಅತ್ಯಾಧುನಿಕ ವಿಷಯಗಳು ಸಹ ಒಳಗೊಂಡಿರಲಿದೆ. ಈ ಅಭ್ಯಾಸ ಕ್ರಮವು ಉದ್ಯೋಗ ಸಂದರ್ಶನದ ಸಿದ್ಧತೆಯನ್ನು ಸಹ ಒಳಗೊಂಡಿದೆ.

ಕೇಂದ್ರ ಸರಕಾರ ಯುವ ಪೀಳಿಗೆಯ ಸ್ಥಿತಿಯನ್ನು ನೋಡಿ ಈ ರೀತಿಯ ಪಠ್ಯಕ್ರಮ ತಂದಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಇದರೊಂದಿಗೆ ಯುವಪೀಳಿಗೆಗೆ ಸಾಧನೆಯನ್ನು ಕಲಿಸಿ ಅವರಿಂದ ಅದನ್ನು ಮಾಡಿಸಿಕೊಂಡರೆ, ಅವರ ಜೀವನದ ಅನೇಕ ಸಮಸ್ಯೆಗಳನ್ನು ತಾವೇ ಸ್ವತಃ ಪರಿಹರಿಸಿಕೊಳ್ಳಲು ಸಕ್ಷಮರಾಗುತ್ತಾರೆ !