ಬರೆಲಿಯಲು ಹಿಂದೂ ಧರ್ಮ ಸ್ವೀಕರಿಸಿ ಪ್ರಿಯಕರನನ್ನು ಮದುವೆಯಾದ ಫರ್ಜಾ

ಫರಜಾನಳಿಗೆ ಪೋಷಕರಿಂದ ಆಕೆಗೆ ಮತ್ತು ಅತ್ತೆಯ ಮನೆಯವರನ್ನು ಕೊಲ್ಲುವ ಬೆದರಿಕೆ

ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಫರಜಾನಳು ಹಿಂದೂ ಧರ್ಮ ಸ್ವೀಕರಿಸಿ ಹಿಂದೂ ಪ್ರಿಯಕರನ ಜೊತೆಗೆ ವಿವಾಹ ಮಾಡಿಕೊಂಡಳು. ವಿವಾಹದ ನಂತರ ಆಕೆಯ ಹೆಸರು ಸರಸ್ವತಿ ಎಂದು ಇಡಲಾಯಿತು. ಇವಳ ಈ ಕೃತಿಗೆ ಆಕೆಯ ಪೋಷಕರು ವಿರೋಧಿಸಿದ್ದಾರೆ. ಸರಸ್ವತಿಯು, ತನ್ನ ಪೋಷಕರು ಆಕೆಗೆ ಮತ್ತು ಆಕೆಯ ಅತ್ತೆಯ ಮನೆಯವರನ್ನು ಕೊಲ್ಲುವ ಬೆದರಿಕೆ ನೀಡುತ್ತಿದ್ದಾರೆ, ಆಕೆ ಒಂದು ವಿಡಿಯೋ ಮಾಡಿ ಅದನ್ನು ಪ್ರಸಾರ ಮಾಡಿ ಈ ಮೂಲಕ ಆಯ್ಕೆ ರಕ್ಷಣೆ ನೀಡಲು ಮನವಿ ಮಾಡಿದ್ದಾಳೆ. ಈ ಬೆದರಿಕೆಯ ಬಗ್ಗೆ ಪೊಲೀಸರು, ನಮ್ಮ ಬಳಿ ಇಲ್ಲಿಯವರೆಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.

ಸರಸ್ವತಿಯು, ೩ ವರ್ಷಗಳ ಹಿಂದೆ ನನ್ನ ಪರಿಚಯ ವೀರೇಂದ್ರ ಕಶ್ಯಪ ಇವರ ಜೊತೆಗೆ ಆಯಿತು. ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ನಾನು ಭಗವಾನ್ ಶ್ರೀಕೃಷ್ಣನನ್ನು ನಂಬುತ್ತೇನೆ. ನಾನು ಹಿಂದೂ ಧರ್ಮ ಸ್ವೀಕರಿಸಿ ವೀರೇಂದ್ರ ಜೊತೆಗೆ ವಿವಾಹ ಮಾಡಿಕೊಂಡೆ ಎಂದು ಹೇಳಿದ್ದಾಳೆ.

ಸಂಪಾದಕೀಯ ನಿಲುವು

ನೂರಾರು ಹಿಂದೂ ಹುಡುಗಿಯರು ಲವ್ ಜಿಹಾದಗೆ ಬಲಿಯಾಗುತ್ತಾರೆ; ಆದರೆ ಹಿಂದೂ ಪೋಷಕರು ಎಂದು ಈ ರೀತಿಯ ಬೆದರಿಕೆ ನೀಡುವುದಿಲ್ಲ; ಆದರೆ ಯಾವುದಾದರೊಂದು ಘಟನೆಯೆಲ್ಲಿ ಮುಸಲ್ಮಾನ ಯುವತಿ ಹಿಂದೂ ಪ್ರಿಯಕರನಿಗಾಗಿ ಧರ್ಮ ಪರಿವರ್ತನೆ ಮಾಡುತ್ತಾಳೆ, ಆಗ ಮುಸಲ್ಮಾನರು ತಕ್ಷಣವೇ ಅವರನ್ನು ಕೊಲ್ಲುವ ಬೆದರಿಕೆ ನೀಡುತ್ತಾರೆ ಮತ್ತು ಕೆಲವು ಸಮಯದಲ್ಲಿ ಅದೇ ರೀತಿ ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತರು ಮಾತನಾಡುವರೇ ?