ಇಂದಿನ ಮಹಿಳೆಯರಿಂದ ತಮ್ಮ ಪುರುಷ ಜೊತೆಗಾರನ ವಿರುದ್ಧ ಬಲಾತ್ಕಾರದ ಕಾನೂನಿನ ದುರುಪಯೋಗ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಉತ್ತರಾಖಂಡ ಉಚ್ಚ ನ್ಯಾಯಾಲಯ

ಡೆಹರಾಡೂನ (ಉತ್ತರಾಖಂಡ) – ಜೊತೆಗಾರನು ಮದುವೆಗೆ ನಿರಾಕರಿಸಿದರೆ ಒಪ್ಪಿಗೆಯಿಂದಾದ ದೈಹಿಕ ಸಂಬಂಧವನ್ನು ಬಲಾತ್ಕಾರವೆಂದು ಹೇಳಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಸಧ್ಯಕ್ಕೆ ಮಹಿಳೆಯರು ಜೊತೆಗಾರ ಪುರುಷನ ವಿರುದ್ಧ ಬಲಾತ್ಕಾರದ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಉತ್ತರಾಖಂಡ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದೆ.

ಅ. ಜೂನ 30, 2020 ರಂದು ಸಂತ್ರಸ್ತೆ ನೀಡಿದ ದೂರಿನಲ್ಲಿ, ಆರೋಪಿ ಜೊತೆಗಾರನೊಂದಿಗೆ 2005 ರಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾಳೆ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು ಮತ್ತು ನಮಗೆ ಕೆಲಸ ಸಿಕ್ಕ ಬಳಿಕ ವಿವಾಹವಾಗಲು ನಿರ್ಧರಿಸಿದ್ದೆವು; ಆದರೆ ಕೆಲಸ ಸಿಕ್ಕ ಬಳಿಕ ಆರೋಪಿ ಮತ್ತೊಬ್ಬ ಮಹಿಳೆಯನ್ನು ವಿವಾಹವಾದನು. ವಿವಾಹದ ಬಳಿಕವೂ ಆರೋಪಿಯೊಂದಿಗೆ ಸಂಬಂಧ ಮುಂದುವರಿದಿತ್ತು. ಅವನು ಮದುವೆಯ ಆಮಿಷವನ್ನೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಆ. ಉಚ್ಚ ನ್ಯಾಯಾಲಯವು, ತನ್ನ ಜೊತೆಗಾರ ಮದುವೆಯಾಗಿರುವುದು ತಿಳಿದಿರುವಾಗಲೂ ಮಹಿಳೆಯು ಸ್ವ ಇಚ್ಛೆಯಿಂದ ಅವನೊಂದಿಗೆ ಸಂಬಂಧವನ್ನು ಇಟ್ಟುಕೊಂಡಳು. ಈ ಸಂಬಂಧದಲ್ಲಿ ಇಬ್ಬರ ಒಪ್ಪಿಗೆಯೂ ಇತ್ತು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಆದ್ದರಿಂದ ಒಪ್ಪಿಗೆಯಿಂದಾದ ಸಂಬಂಧಗಳನ್ನು ಬಲಾತ್ಕಾರವೆಂದು ಹೇಳಲು ಸಾಧ್ಯವಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ರಿಲೇಶನಶಿಪ್ ನಲ್ಲಿ ಇರುವಾಗಲೇ ವಿವಾಹದ ಆಶ್ವಾಸನೆಯ ಸತ್ಯತೆಯನ್ನು ಪರಿಶೀಲಿಸುವ ಆವಶ್ಯಕವಿದೆ. ಸಧ್ಯದ ಪ್ರಕರಣದಲ್ಲಿ ಇಬ್ಬರ ನಡುವೆ ಕಳೆದ 15 ವರ್ಷಗಳಿಂದ ಸಂಬಂಧವಿದೆ. ಆರೋಪಿಯ ಮದುವೆಯ ಬಳಿಕವೂ ಇಬ್ಬರ ನಡುವೆ ಸಂಬಂಧ ಮುಂದುವರಿದಿದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಮೊದಲು ನೀಡಿರುವ ಆಶ್ವಾಸನೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.