ಉತ್ತರಾಖಂಡದ ಚಾರಧಾಮ ಯಾತ್ರೆಗೆ ಪ್ರಾರಂಭ

ಋಷಿಕೇಶ (ಉತ್ತರಾಖಂಡ) – ಉತ್ತರಾಖಂಡದ ಚಾರಧಾಮ ಯಾತ್ರೆಗೆ ಎಪ್ರಿಲ್ 22 ರಿಂದ ಅಂದರೆ ಅಕ್ಷಯ ತೃತೀಯಾದಿಂದ ಪ್ರಾರಂಭವಾಯಿತು. ಎಪ್ರಿಲ್ 21 ರ ವರೆಗೆ ಯಾತ್ರೆಗಾಗಿ 16 ಲಕ್ಷ ಭಕ್ತರು ನೊಂದಾಯಿಸಿದ್ದಾರೆ. ಗಂಗೋತ್ರಿ ಧಾಮದ ಬಾಗಿಲು ಮಧ್ಯಾಹ್ನ 12.35 ಗಂಟೆಗೆ, ಯಮುನೋತ್ರಿ ಧಾಮದ ಬಾಗಿಲು ಮಧ್ಯಾಹ್ನ 12.41 ಗಂಟೆಗೆ ತೆರೆಯಲಾಯಿತು. ಕೇದಾರನಾಥ ಧಾಮದ ಬಾಗಿಲು ಎಪ್ರಿಲ್ 25, ಬದ್ರಿನಾಥ ಧಾಮದ ಬಾಗಿಲು ಎಪ್ರಿಲ್ 27 ರಂದು ತೆರೆಯಲಿದೆ.

ಉತ್ತರಾಖಂಡ ಸರಕಾರ ಪ್ರತಿದಿನ ನಿರ್ದಿಷ್ಟ ಸಂಖ್ಯೆಯ ಯಾತ್ರಿಕರಿಗೆ ಭೇಟಿಗೆ ಅವಕಾಶ ನೀಡುವುದಾಗಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಹಾಗೂ ಭಕ್ತರಿಗಾಗಿ ಆನ್ ಲೈನ ಮತ್ತು ಆಫ್ ಲೈನ್ ನೊಂದಣಿ ಮುಂದುವರಿಸಲಾಗಿದೆ.

ಪ್ರತಿಯೊಬ್ಬ ಭಕ್ತನ ಸುರಕ್ಷಿತ ಪ್ರವಾಸ ರಾಜ್ಯ ಸರಕಾರದ ಜವಾಬ್ದಾರಿ ! – ಮುಖ್ಯಮಂತ್ರಿ ಧಾಮಿ

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಭಾಜಪ ಆಡಳಿತವಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು, ಎಪ್ರಿಲ್ 21 ರಂದು ಋಷಿಕೇಶದಿಂದ ಚಾರಧಾಮ ಯಾತ್ರೆಯನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಲಾಗಿದೆ. ಪ್ರತಿಯೊಬ್ಬ ಭಕ್ತನ ಸುರಕ್ಷಿತ ಪ್ರವಾಸವು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ನಾವು ಭಕ್ತರಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದೇವೆ. ಭಾರತ ಮತ್ತು ವಿದೇಶಗಳಿಂದ ಬರುವ ಪ್ರತಿಯೊಬ್ಬ ಭಕ್ತನ ಪ್ರವಾಸ ಸುರಕ್ಷಿತವಾಗಿರಲಿದೆ ಮತ್ತು ಪ್ರತಿಯೊಬ್ಬನಿಗೂ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸಿಗುವ ಬಗ್ಗೆ ಸರಕಾರ ಗಮನ ಹರಿಸಲಿದೆ ಎಂದು ಹೇಳಿದರು.