ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಕೊಲೆಗೆ ಸಂಚು – ಕೆ. ಎಸ್. ಈಶ್ವರಪ್ಪ ಆರೋಪ

ಬಳ್ಳಾರಿ : ಪೊಲೀಸರು ತನಿಖೆಯ ವಿಚಾರದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ಅಲಿಯಾಸ್ ಶಾಹಿರ್ ಶೇಖ್ ನನ್ನು ಬಂಧಿಸಿದ್ದಾರೆ. ಈತ ಕೊಲೆಗೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದು ಭಾಜಪ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಈತನೇ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸಂಚು ರೂಪಿಸಿದ್ದ, ಎಂದು ಹೇಳಿದರು. ಈ ಹಿಂದೆಯೂ ನಾನು ಹಿಂದುತ್ವದ ಬಗ್ಗೆ ಮಾತಾಡಿದಾಗ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನದಲ್ಲಿ ತಿಳಿಸಿದಾಗ. ಸಿದ್ದರಾಮಯ್ಯ ನೇತೃತ್ವದ ಸರಕಾರ ಇತ್ತು. ಆಗ ಭದ್ರತೆ ನೀಡಿದ್ದರು. ಕೊಲೆಯ ಸಂಚಿನ ಹಿಂದಿರುವ ಕಾರಣ ಸ್ಪಷ್ಟವಾಗಿಲ್ಲ. ಹಿಂದುತ್ವಕ್ಕಾಗಿ ಈ ಸಂಚು ರೂಪಿಸಿದ್ದರೆ ನಾವು ಹೆದರುವವರಲ್ಲ ಎಂದರು. (ಬಹುಸಂಖ್ಯಾತವಿರುವ ಭಾರತದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೇ ಕೊಲೆ ಬೆದರಿಕೆ ಸಿಗುತ್ತದೆ ಇದು ದುರದೃಷ್ಟಕರವಾಗಿದೆ – ಸಂಪಾದಕರು)
LeT-backed PFI planned to kill Karnataka ex-dy CM Eshwarappa, says Pujari https://t.co/wkLnXH8sfj
— TOI Cities (@TOICitiesNews) April 13, 2023
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!