ಚಾರಧಾಮ ಯಾತ್ರೆಗೆ ಆನ್ ಲೈನ ಬುಕಿಂಗ್ ಆರಂಭ

ಡೆಹರಾಡುನ (ಉತ್ತರಾಖಂಡ) – ಚಾರಧಾಮ ಯಾತ್ರೆಗೆ ಆನ್ ಲೈನ ಬುಕಿಂಗ್ ಫೆಬ್ರವರಿ 20 ರಂದು ಪ್ರಾರಂಭವಾಗಿದೆ. ಎಪ್ರಿಲ್ 25 ರಂದು ಕೇದಾರನಾಥ ಧಾಮ ಹಾಗೂ ಎಪ್ರಿಲ್ 27 ರಂದು ಬದ್ರಿನಾಥ ಧಾಮ ಕವಾಡೆ (ಮುಖ್ಯದ್ವಾರ) ತೆರೆಯಲಿದೆ. ಚಾರಧಾಮ ಯಾತ್ರೆಗೆ ಹೋಗುವ ರಸ್ತೆಯ ಮೇಲೆ ಸುಮಾರು 10 ಕಿಲೋಮೀಟರ ವರೆಗೆ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಕುಸಿದಿದ್ದು ಈ ಬಿರುಕುಗಳು ದೊಡ್ಡದಾಗುತ್ತಿವೆ. ಇದರಿಂದ ಈ ಸಲದ ಯಾತ್ರೆ ಸುಲಭವಾಗಿ ನಡೆಯಲು ಸರಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ.