ದೆಹಲಿಯಲ್ಲಿ ಗೋಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ್’ ಘೋಷಣೆಯ ಬರಹ !

ನವ ದೆಹಲಿ – ಇಲ್ಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿನ ಒಂದು ಗೋಡೆಯ ಮೇಲೆ ‘ಖಲಿಸ್ತಾನ ಜಿಂದಾಬಾದ್’ ಮತ್ತು ‘ಜನಮತ ೨೦೨೦’ ಎಂಬ ಘೋಷಣೆ ಬರೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಈ ಘೋಷಣೆಯ ಬಗ್ಗೆ ಮಾಹಿತಿ ದೊರೆಯುತ್ತಲೆ ಅವರು ಘಟನಾಸ್ಥಳಕ್ಕೆ ಹೋಗಿ ಘೋಷಣೆಗಳನ್ನು ಅಳಿಸಿದರು. ಪೊಲೀಸರು ಇದನ್ನು ಬರೆದಿರುವವರನ್ನು ಹುಡುಕುತ್ತಿದ್ದಾರೆ.

ಸಂಪಾದಕರ ನಿಲುವು

ದೇಶದ್ರೋಹಿ ಖಲಿಸ್ತಾನಿ ಚಳುವಳಿ ದೇಶದಲ್ಲಿ ಮತ್ತೆ ತಲೆದೋರುತ್ತಿದೆ. ಅದನ್ನು ಈಗಲೇ ಮುಗಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಹಿಂದೆ ನಡೆದ ತಪ್ಪಿನ ಹಾಗೆ ಈಗ ತಪ್ಪು ಮಾಡಿದರೆ, ಮತ್ತೊಮ್ಮೆ ದೊಡ್ಡ ಹಾನಿ ಆಗಬಹುದು !