ಗುವಾಹಾಟಿಯಲ್ಲಿ (ಅಸ್ಸಾಂ) ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಚಾಕುವಿನಿಂದ ಇರಿದ !

ಮದುವೆಯಾಗಲು ನಿರಾಕರಿಸಿದ ಪ್ರಕರಣ !

ಗುವಾಹಾಟಿ (ಅಸ್ಸಾಂ) – ಅಸ್ಸಾಂನ ಗುವಾಹಾಟಿ ನಗರದ ಅಂಜಲಿ ಬಿಸ್ವಾಸ್ ಎಂಬ ಹಿಂದೂ ಯುವತಿಯು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕಾಗಿ ರಫೀಕ್ ಅಲಿ ಎಂಬ ಮುಸಲ್ಮಾನ ಯುವಕನು ಅವಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಸ್ಥಳೀಯರ ನೀಡಿರುವ ಮಾಹಿತಿ ಪ್ರಕಾರ, ರಫೀಕ್ ಅಲಿಯು ಅಂಜಲಿ ಬಿಸ್ವಾಸ್ ಕೆಲಸಕ್ಕೆ ಹೋಗುತ್ತಿದ್ದಾಗ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಿದನು. ರಫೀಕ್ ಅಲಿ ಆಕೆಯ ಕೈ, ಕಣ್ಣು, ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯು ಕಿರುಚಿಕೊಂಡ ತಕ್ಷಣ ಸ್ಥಳೀಯರು ಧಾವಿಸಿ ಬಂದು ಅವಳನ್ನು ಬಿಡಿಸಿದರು. ಆದರೆ ರಫೀಕ್ ಪರಾರಿಯಾದನು; ನಂತರ ಪೊಲೀಸರು ಆತನನ್ನು ಬಂಧಿಸಿದರು.

ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಗುವಾಹಾಟಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ಆಕೆಯನ್ನು ತೀವ್ರ ನಿಗಾ ಘಟಕಕ್ಕೆ (ಐ.ಸಿ.ಯು.) ಸ್ಥಳಾಂತರಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಸಂಪೂರ್ಣ ಗುಣವಾಗಲು ಹಲವು ದಿನಗಳು ಬೇಕು ಎಂದು ಅಲ್ಲಿನ ವೈದ್ಯರು ತಿಳಿಸಿದರು.

ಸ್ಥಳೀಯರ ಪ್ರಕಾರ, ಆರೋಪಿ ರಫೀಕ್ ಹಲವು ದಿನಗಳಿಂದ ಸಂತ್ರಸ್ತ ಹಿಂದೂ ಯುವತಿಯನ್ನು ಹಿಂಬಾಲಿಸುತ್ತಿದ್ದನು; ಆದರೆ ಯುವತಿ ಅವನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಳು. ರಫೀಕ್ ಆಕೆಗೆ ಹಲವು ಬಾರಿ ಬೆದರಿಕೆಯನ್ನೂ ಹಾಕಿದ್ದ; ಆದರೆ ಯುವತಿಯು ಅದನ್ನು ನಿರ್ಲಕ್ಷಿಸಿದ್ದಳು.

ಸಂಪಾದಕೀಯ ನಿಲುವು

ದೇಶದ ಮೂಲೆಮೂಲೆಗಳಲ್ಲಿ ಮುಸಲ್ಮಾನ ಯುವಕರು ಹಿಂದೂ ಹುಡುಗಿಯರ ಅತ್ಯಾಚಾರ ಮಾಡುತ್ತಿದ್ದಾರೆ. ಹಾಗೂ ಅವರ ಮೇಲೆ ಶಸ್ತ್ರಾಸ್ತ್ರ ಸಹಿತ ಹಲ್ಲೆ ನಡೆಸುತ್ತಿದ್ದಾರೆ ! ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯ ಭೀಕರತೆಯನ್ನು ಕಂಡು ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ !