ಕರೀಂಗಂಜ್ (ಅಸ್ಸಾಂ) – ಇಲ್ಲಿನ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಲಫಾಸಲ್ ಗ್ರಾಮದಲ್ಲಿ ೧೦ ಲಕ್ಷ ಮೌಲ್ಯದ ಎರಡು ಸಾವಿರ ‘ಯಾಬಾ’ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ರೈಫಲ್ಸ್ ಮತ್ತು ಗಡಿ ಭದ್ರತಾ ಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ‘ಯಾಬಾ’ ಈ ಮಾತ್ರೆಗಳನ್ನು ನಶೆಗಾಗಿ ಬಳಸಲಾಗುತ್ತದೆ.
In a joint op, Assam Rifles & BSF recovered 2000 Yaba tablets worth Rs 10 lakhs in the general area of Lafasail village in Assam’s Karimganj district along the Indo-Bangladesh border, yesterday. Seized contraband drugs handed over to Karimganj PS for further probe: Assam Rifles pic.twitter.com/0fkk4KOLyt
— ANI (@ANI) September 26, 2022
ಅವು ಕೆಂಪು ಮತ್ತು ಗುಲಾಬಿ ಬಣ್ಣದಲ್ಲಿರುತ್ತವೆ. ಈ ಮಾತ್ರೆಗಳಲ್ಲಿ ಮೆಥಾಂಫೆಟಾ ಮೈನ್ ಮತ್ತು ಕೆಫೀನ್‌ನ ಮಿಶ್ರಣವನ್ನು ಹೊಂದಿರುತ್ತವೆ. ಇದು ವ್ಯಕ್ತಿಯ ಮಧ್ಯವರ್ತಿ ನರಮಂಡಲವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಈ ಮಾತ್ರೆಗಳನ್ನು ಮ್ಯಾನ್ಮಾರ್‌ನಿಂದ ಕಳುಹಿಸಲಾಗುತ್ತದೆ ಮತ್ತು ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಬರುತ್ತದೆ. ಇದನ್ನು ‘ಕ್ರೇಜಿ ಮೆಡಿಸಿನ್’ ಎಂದೂ ಕರೆಯುತ್ತಾರೆ.