ಬರೇಲಿ (ಉತ್ತರ ಪ್ರದೇಶ) ಮಸೀದಿಯನ್ನು ಬಾಂಬ್‌ನಿಂದ ಸ್ಫೋಟಗೊಳಿಸುವುದಾಗಿ ಬೆದರಿಕೆಯನ್ನು ನೀಡುವ ಮಹಮ್ಮದ ಸಮದನ ಬಂದನ

ಆರೋಪಿ ಮಹಮ್ಮದ ಸಮದ

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಜಾಮಾ ಮಸೀದಿಯನ್ನು ಶುಕ್ರವಾರದ ನಮಾಜ್‌ನ ಸಮಯದಲ್ಲಿ ಬಾಂಬ್‌ನಿಂದ ಸ್ಫೋಟಗೊಳಿಸುವ ಮತ್ತು ಮಸೀದಿಯ ಇಮಾಮನನ್ನು (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವನನ್ನು) ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪೊಲೀಸರು ಮಹಮ್ಮದ ಸಮದ ಎಂಬ ಹೆಸರಿನ ವ್ಯಕ್ತಿಯನ್ನು ಬಂದಿಸಿದ್ದಾರೆ.

ಇವನು ಸಪ್ಟೆಂಬರ ೭ ರಂದು ಮಸೀದಿಯ ಗೋಡೆಯ ಮೇಲೆ ಈ ಮೇಲಿನ ಬೆದರಿಕೆಯ ಭಿತ್ತಿಪತ್ರವನ್ನು ಅಂಟಿಸಿದ್ದನು. ಪೊಲೀಸರು, ಮಸೀದಿಯ ಇಮಾಮ ಮುಫ್ತಿ ಖುರ್ಷೀದ ಆಲಮ ಇವನು ಈದ್ ಮಿಲಾದ್ ಉನ-ನಬೀ ಈ ಹಬ್ಬದ ಸಮಯದಲ್ಲಿ ಆಯೋಜಿಸಿದ ಮೆರವಣಿಗೆಯ ಸಮಯದಲ್ಲಿ ಡೀಜೆ (ದೊಡ್ಡ ಸಂಗೀತ ಯಂತ್ರ) ಯನ್ನು ಉಪಯೋಗಿಸಬಾರದೆಂದು ಕರೆ ನೀಡಿದ್ದನು. ಇದರಿಂದ ಸಮದನಿಗೆ ಕೋಪ ಬಂದಿತ್ತು. ಇಮಾಮ ಆಲಮನನ್ನು ಮಸೀದಿಯಿಂದ ತೆಗೆಯಲು ಅವನು ಬೆದರಿಕೆಯ ಸಂಚು ಹೂಡಿದನು.

ಸಂಪಾದಕೀಯ ನಿಲುವು

ಹಿಂದೂಗಳು ಎಂದಿಗೂ ಹೀಗೆ ಬೆದರಿಕೆ ಹಾಕುವುದಿಲ್ಲ, ಇಂತಹ ಕೃತ್ಯವನ್ನೂ ಮಾಡುವುದಿಲ್ಲ, ಎನ್ನುವ ಸತ್ಯವನ್ನು ಈಗಲಾದರೂ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎಂದು ಹೇಳುವವರು ಗಮನಿಸುವರೆ ?