ಮಹಾತ್ಮ ಗಾಂಧಿಯವರು ದೇಶವನ್ನು ವಿಭಜನೆ ಮಾಡಿರುವುದರಿಂದ ಅವರು ಮಹಾತ್ಮರಲ್ಲ ಮತ್ತು ರಾಷ್ಟ್ರಪಿತ ಕೂಡ ಆಗಲು ಸಾಧ್ಯವಿಲ್ಲ, ಎಂದು ಹೇಳುವ ತರುಣ ಮುರಾರಿ ಬಾಪು ಇವರ ಮೇಲೆ ದೂರು ದಾಖಲು

* ಸ್ವಾತಂತ್ರ್ಯವೀರ ಸಾವರಕರ ಇವರನ್ನು ಕಾಂಗ್ರೆಸ್.ನವರಿಂದ ಸತತವಾಗಿ ಮಾಫಿವೀರ ಎನ್ನಲಾಗುತ್ತದೆ ಹಾಗೂ ಸ್ವಾತಂತ್ರ್ಯವೀರ ಸಾವರಕರರನ್ನು ಗಾಂಧಿ ಹತ್ಯೆಯ ಆರೋಪದಿಂದ ನಿರಪರಾಧಿಯಾಗಿ ಮುಕ್ತವಾದರೂ ಅವರನ್ನು ಗಾಂಧಿಯ ಹತ್ಯೆಗೆ ಜವಾಬ್ದಾರ ಎಂದು ಹೇಳುವವರ ಮೇಲೆಯೂ ಈ ರೀತಿಯ ದೂರು ಏಕೆ ದಾಖಲಿಸಲಾಗುತ್ತಿಲ್ಲ ?- ಸಂಪಾದಕರು 

* ಮಧ್ಯಪ್ರದೇಶದ ಕಾಂಗ್ರೆಸ್ಸಿನ ನಾಯಕ ದಿಗ್ವಿಜಯ ಸಿಂಗ ಇವರು ಸ್ವಾತಂತ್ರ್ಯವೀರ ಸಾವರಕರ ಇವರ ಅವಮಾನ ಮಾಡುತ್ತಿದ್ದರು ಅವರ ಮೇಲೆ ಈ ರೀತಿಯ ದೂರು ರಾಜ್ಯದ ಭಾಜಪ ಸರಕಾರವು ನೋಂದಾಯಿಸಬೇಕು ಇತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ.-ಸಂಪಾದಕರು

ತರುಣ ಮುರಾರಿ ಬಾಪು

ನರಸಿಂಗಪುರ (ಮಧ್ಯಪ್ರದೇಶ) – ಮ. ಗಾಂಧಿ `ಮಹಾತ್ಮ’ರಲ್ಲ ಮತ್ತು ರಾಷ್ಟ್ರಪಿತಾ ಕೂಡ ಆಗಲು ಸಾಧ್ಯವಿಲ್ಲ. ಅವರು ಜೀವಂತವಾಗಿರುವಾಗಲೇ ಅವರು ದೇಶವನ್ನು ವಿಭಜನೆ ಮಾಡಿದರು, ಆದ್ದರಿಂದ ಅವರನ್ನು ದೇಶದ್ರೋಹಿ ಎನ್ನಬೇಕು, ಎಂದು ತರುಣ ಮುರಾರಿ ಬಾಪು ಎಂಬ ಭಾಗವತ ಕಥಾವಾಚಕರು ಹೇಳಿದರು, ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ತರುಣ ಮುರಾರಿ ಬಾಪು ಈಗಲೂ ಅವರ ಅಭಿಪ್ರಾಯದಲ್ಲಿ ದೃಢವಾಗಿದ್ದರೆ. ತರುಣ ಮುರಾರಿ ಬಾಪು ಇವರು ಛಿಂದವಾಡಾ ರೋಡಲ್ಲಿ ವೀರ ಲಾನ ಇಲ್ಲಿ ಶ್ರೀಮದ್ಭಾಗವತ ಕಥೆಯ ಸಮಯದಲ್ಲಿ ಮೇಲಿನ ಹೇಳಿಕೆ ನೀಡಿದ್ದಾರೆ. ಈ ಮೊದಲು ಧರ್ಮ ಸಂಸತ್ತಿನಲ್ಲಿ ಗಾಂಧಿಯವರ ವಿರುದ್ಧ ಕಪೋಲಕಲ್ಪಿತ ಅಪಶಬ್ದ ಉಪಯೋಗಿಸಿರುವುದು ಆರೋಪದ ಮೇಲೆ ಕಾಲಿಚರಣ ಮಹಾರಾಜ ಅವರನ್ನು ಬಂಧಿಸಲಾಗಿದೆ .

(ಸೌಜನ್ಯ : APN NEWS)