ಕಾಬೂಲ್ ನಲ್ಲಿ ಯುಕ್ರೇನ್‌ನ ವಿಮಾನದ ಅಪಹರಣ

ಕಾಬುಲ್ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ಯುಕ್ರೇನ್‌ನ ವಿಮಾನವನ್ನು ಅಪಹರಿಸಿ ಇರಾನ್‌ಗೆ ತೆಗೆದುಕೊಂಡು ಹೋಗಿರುವುದಾಗಿ ಹೇಳಲಾಗುತ್ತಿದೆ. ಯುಕ್ರೇನ್‌ನ ವಿಮಾನವು ತನ್ನ ನಾಗರಿಕರನ್ನು ಕರೆತರಲು ಅಫಘಾನಿಸ್ತಾನಕ್ಕೆ ಹೋಗಿತ್ತು. ಆಗ ವಿಮಾನವನ್ನು ಅಪಹರಿಸಲಾಗಿದೆ ಎಂದು ಯುಕ್ರೇನ್‌ನ ಉಪ ವಿದೇಶಾಂಗ ಮಂತ್ರಿಗಳು ದಾವೆ ಮಾಡಿದ್ದಾರೆ ಆದರೆ ಈ ವಿಮಾನವನ್ನು ಯಾರು ಅಪಹರಣ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾಗರಿಕರನ್ನು ಕಾಬುಲ್ ವಿಮಾನ ನಿಲ್ದಾಣದಿಂದ ಯುಕ್ರೇನ್ ಗೆ ಕರೆದುಕೊಂಡು ಹೋಗಲು ಆ ವಿಮಾನವು ಬಂದಿತ್ತು. ಈ ವಿಮಾನವು ಅಲ್ಲಿಂದ ಇರಾನ್‌ನ ದಿಕ್ಕಿನಲ್ಲಿ ಉಡ್ಡಾಣ ಮಾಡಿತ್ತು. ಮತ್ತೊಂದು ಕಡೆ ಇರಾನ್ ಯುಕ್ರೇನ್‌ನ ದಾವೆಯನ್ನು ತಳ್ಳಿಹಾಕಿದೆ. ‘ಯುಕ್ರೇನ್‌ನ ವಿಮಾನವು ಆಗಸ್ಟ್ ೨೩ರಂದು ಮಶಹದ್‌ನಲ್ಲಿ ಇಂಧನ ತುಂಬಿಸಲು ಇಳಿದಿತ್ತು. ಅನಂತರ ಅದು ಯುಕ್ರೇನ್‌ಗೆ ಮರಳಿದೆ, ಎಂದು ಇರಾನ್‌ನಿಂದ ಸ್ಪಷ್ಟೀಕರಣ ನೀಡಲಾಗಿದೆ.