ಕಾಬುಲ್ (ಅಫಘಾನಿಸ್ತಾನ) – ತಾಲಿಬಾನಿನ ಉಗ್ರಗಾಮಿಗಳು ಅಫಘಾನಿಸ್ತಾನದಲ್ಲಿನ ಕಂಧಾರ ಹಾಗೂ ಹೆರಾತನಲ್ಲಿ ಮುಚ್ಚಿರುವ ಭಾರತೀಯ ರಾಯಭಾರ ಕಛೇರಿಯೊಳಗೆ ನುಗ್ಗಿದರು. ತಾಲಿಬಾನಿ ಉಗ್ರಗಾಮಿಗಳು ರಾಯಭಾರಿ ಕಚೇರಿಯ ಬೀಗವನ್ನು ಒಡೆದು ಒಳಗೆ ನುಗ್ಗಿದರು. ಅವರು ರಾಯಭಾರ ಕಚೇರಿಯಲ್ಲಿರುವ ಕೆಲವು ಕಾಗದಪತ್ರಗಳ ತಪಾಸಣೆ ಮಾಡಿದರು. ತಾಲಿಬಾನಿಯರು ಈ ರಾಯಭಾರ ಕಛೇರಿಯ ಪರಿಸರದಲ್ಲಿ ನಿಲುಗಡೆ ಮಾಡಿದ್ದ ವಾಹನಗಳನ್ನು ಕೂಡ ಕದ್ದಿದ್ದಾರೆ.
Besides the embassy in #Kabul, India operated four consulates in #Afghanistan https://t.co/xrhydXTmQl #Taliban
— India TV (@indiatvnews) August 20, 2021
ತಾಲಿಬಾನಿನಿಂದ ಅಫಘಾನಿ ಗುಪ್ತಚರರ ಶೋಧನೆ
ಕಾಬೂಲಿನಲ್ಲಿರುವ ತಾಲಿಬಾನಿ ಉಗ್ರಗಾಮಿಗಳು ಮನೆಗಳೊಳಗೆ ನುಗ್ಗಿ ಅಫಘಾನಿ ಗುಪ್ತಚರ ವ್ಯವಸ್ಥೆ ಎನ್.ಡಿ.ಆರ್.ಗೋಸ್ಕರ ಕೆಲಸ ಮಾಡುವ ಅಫಘಾನಿ ನಾಗರಿಕರನ್ನು ಶೋಧಿಸುತ್ತಿದ್ದಾರೆ. ಜಲಾಲಾಬಾದ್ ಹಾಗೂ ಕಾಬೂಲಿನಲ್ಲಿರುವ ಭಾರತೀಯ ರಾಯಭಾರಿ ಕಛೇರಿಗಳಲ್ಲಿ ತಾಲಿಬಾನಿ ಉಗ್ರಗಾಮಿಗಳು ಯಾವ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಎಂಬುದರ ಮಾಹಿತಿ ಇದುವರೆಗೆ ತಿಳಿದು ಬಂದಿಲ್ಲ.