ಕೇರಳದಲ್ಲಿ ಲವ್ ಜಿಹಾದ್ ಅಸ್ತಿತ್ವದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನೀಡಿದ್ದ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ ನಾಯಕ!

ಕಮ್ಯುನಿಸ್ಟ್ ಪಕ್ಷದ ಒತ್ತಡದ ಪರಿಣಾಮ !

ಲವ್ ಜಿಹಾದ್ ವಿಚಾರಣೆಗೆ ಕಮ್ಯುನಿಸ್ಟ್ ಪಕ್ಷದ ನಾಯಕರು ಏಕೆ ಹೆದರುತ್ತಾರೆ, ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಲವ ಜಿಹಾದ ಮಾಡುವವರಿಗೆ ಪರೋಕ್ಷ ಬೆಂಬಲ ಇರುವುದರಿಂದ ಅಂತಹ ಯಾವುದೇ ವಿಚಾರಣೆ ನಡೆಸಲು ಅವರು ಅನುಮತಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಜೋಸ್ ಕೆ. ಮಣಿ

ತಿರುವನಂತಪುರಂ (ಕೇರಳ) – ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ ೬ ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಎಲ್.ಡಿ.ಎಫ್ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಜೋಸ್ ಕೆ. ಮಣಿಯವರು ‘ಒಂದುವೇಳೆ ಕೇರಳದಲ್ಲಿ ಲವ ಜಿಹಾದ ಬಗ್ಗೆ ಚಿಂತೆಯ ವಾತಾವರಣವಿದ್ದರೆ ಅದರ ತನಿಖೆ ಮಾಡಬೇಕು’ ಎಂದು ಹೇಳಿಕೆ ನೀಡಿದ್ದರು. ಆದರೆ ಕಮ್ಯುನಿಸ್ಟ್ ಪಕ್ಷದ ನಾಯಕರ ಒತ್ತಡದಿಂದ ಮಣಿಯವರಿಗೆ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕಾಯಿತು.

೧. ಮಣಿಯವರಲ್ಲಿ ಈ ಬಗ್ಗೆ ವಿಚಾರಿಸಲಾದ ಪ್ರಶ್ನೆಗೆ ಉತ್ತರಿಸುವಾಗ ಅವರು, ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದರೆ, ಅದರ ತನಿಖೆ ಮಾಡಬೇಕು, ಪರಿಹಾರ ಮಾಡಬೇಕು ಜನರಿಗೆ ಇದರ ಬಗ್ಗೆ ಅನುಮಾನಗಳಿದ್ದರೂ ಅದನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದ್ದರು.

೨. ನಂತರ ಕಮ್ಯುನಿಸ್ಟ್ ಪಕ್ಷದ ಮುಖಂಡರು, ಇದು ಮಣಿಯವರ ವೈಯಕ್ತಿಕ ಅಭಿಪ್ರಾಯವಾಗಿದೆ ನಮ್ಮ ಘೋಷಣಾ ಪತ್ರದಲ್ಲಿ, ಲವ್ ಜಿಹಾದ್ ಎಂಬ ಪದವನ್ನು ಮತಾಂಧ ಶಕ್ತಿಗಳು ಸೃಷ್ಟಿಸಿವೆ ಎಂದು ಸುಸ್ಪಷ್ಟಗೊಳಿಸಲಾಗಿದೆ ಎಂದರು.

೩. ಬಿಜೆಪಿಯ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ ಅವರು, ಬಿಜೆಪಿ ಮಂಡಿಸುತ್ತಿರುವ ಅಂಶವು ರಾಜ್ಯದ ಪ್ರಚಾರದ ಮುಖ್ಯ ಅಂಶವಾಗಿದೆ ಎಂದು ಮಣಿಯವರ ಹೇಳಿಕೆಯು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದರೆ ನಾವು ಜಿಹಾದ ವಿರೋಧಿ ಕಾನೂನನ್ನು ರೂಪಿಸುತ್ತೇವೆ. `ನಾವು ಜನರಿಗೆ ಭರವಸೆ ನೀಡಿದ್ದೇವೆ’, ಎಂದು ಅವರು ಹೇಳಿದರು.

ಕ್ರೈಸ್ತ ಸಮುದಾಯವು ಮಣಿಯ ಹೇಳಿಕೆಯನ್ನು ಸ್ವಾಗತಿಸಿದೆ !

ಮಣಿಯವರ ಹೇಳಿಕೆಯನ್ನು ಕೇರಳ ಕ್ಯಾಥೊಲಿಕ್ ಬಿಷಪ್ಸ್ ಕೌನ್ಸಿಲ್ ಬೆಂಬಲಿಸಿದೆ. ಈ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ, ಕೇರಳದಲ್ಲಿ ಲವ್ ಜಿಹಾದ್ ಇದೊಂದು ವಸ್ತುಸ್ಥಿತಿಯಾಗಿದೆ ಮಣಿಯವರ ಹೇಳಿಕೆಯಿಂದ ನಮಗೂ ಸಂತೋಷವಾಗಿದೆ. ರಾಜ್ಯದ ಇತರ ಪಕ್ಷಗಳು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಹೇಳಿದೆ