೫ ಪ್ರಮುಖ ಸಂತರು ಮತ್ತು ಇತರ ೨೬ ಸಂತರಿಗೆ ಭದ್ರತೆ ಒದಗಿಸಿದ ಪೊಲೀಸರು
ಹರಿದ್ವಾರ (ಉತ್ತರಾಖಂಡ) – ಏಪ್ರಿಲ್ ೧ ರಿಂದ ಇಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವು ಸಂತರು ಅಸುರಕ್ಷಿತ ಅನಿಸುತ್ತಿದೆ ಎಂದು ಕೆಲವು ಸಂತರು ಹೇಳಿದ್ದಾರೆ. ಅಖಿಲ ಭಾರತ ಅಖಾಡಾ ಪರಿಷತ್ತಿನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಐದು ಪ್ರಮುಖ ಸಂತರಿಗೆ ವೈ-ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದ್ದು, ಇತರ ೨೬ ಸಂತರಿಗೆ ಸರಕಾರಿ ವೆಚ್ಚದಲ್ಲಿ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪೊಲೀಸ್, ಅರೆಸೇನಾಪಡೆ ಮತ್ತು ರಾಷ್ಟ್ರೀಯ ಭದ್ರತಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ೧೦ ಕ್ಕೂ ಹೆಚ್ಚು ಸಂತರು ರಕ್ಷಣೆ ಕೋರಿದ್ದಾರೆ. ವಾಸ್ತವವಾಗಿ, ಈ ಸಂತರಿಗೆ ಯಾವುದೇ ಬೆದರಿಕೆ ಬಂದಿಲ್ಲ ಅಥವಾ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆಯು ಸಹ ಮಾಹಿತಿಯನ್ನು ನೀಡಿಲ್ಲ.
कुंभ मेला अब औपचारिक तौर पर एक अप्रैल से शुरू होकर 28 अप्रैल तक ही चलेगा (@abhishek6164) #Prayagraj #UttarPradesh #Haridwar #Kumbh #KumbhMela2021 https://t.co/SVybXUwBtM
— AajTak (@aajtak) February 20, 2021
ಈ ಬಗ್ಗೆ ಕುಂಭಮೇಳದ ಪೊಲೀಸ್ ನಿರೀಕ್ಷಕರಾದ ಸಂಜಯ್ ಗುಂಜಯಾಲ್ ಅವರು ಪ್ರಸ್ತುತ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ. ಜಾತ್ರೆಯ ಸಮಯದಲ್ಲಿ ಅಗತ್ಯವಿದ್ದರೆ ರಕ್ಷಣೆ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ
#Haridwar कुंभ की अवधि छोटा करने पर भड़के साधु-संत, सरकार की मंशा पर उठाए सवाल@Ranapankaj99 की रिपोर्टhttps://t.co/h2hBG0ucDR
— ABP Ganga (@AbpGanga) February 18, 2021