ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಪೂಜ್ಯಾಪಾದ ಸಂತಶ್ರೀ ಅಸಾರಾಮ್ ಬಾಪು

ಜೋಧಪುರ (ರಾಜಸ್ಥಾನ) – ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪೂಜ್ಯಾಪಾದ ಸಂತಶ್ರೀ ಅಸಾರಾಮ್ ಬಾಪು ಅವರಿಗೆ ಉಸಿರಾಟದ ತೊಂದರೆಯಾಗಲಾರಂಭಿಸಿತು. ಅವರನ್ನು ಮ.ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಅವರು ಜೈಲಿನ ಆಸ್ಪತ್ರೆಯಲ್ಲಿ ಒಂದು ಗಂಟೆ ಚಿಕಿತ್ಸೆ ಪಡೆದಿದ್ದರು; ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಅವರ ಎಕ್ಸರೆ ಮತ್ತು ರಕ್ತದ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಕಾರ್ಡಿಯಾಲಾಜಿ ವೈದ್ಯರನ್ನು ಸಹ ಕರೆಯಲಾಯಿತು. ಅವರ ಇಸಿಜಿ ವರದಿಯು ಸಾಮಾನ್ಯವಾಗಿದೆ. ಈ ಆಸ್ಪತ್ರೆಯಿಂದ ಅವರನ್ನು ನಂತರ ಮಥುರಾದಾಸ್ ಮಾಥುರ ಆಸ್ಪತ್ರೆಯ ಸಿಸಿಯು ವಾರ್ಡ್‌ಗೆ ಸ್ಥಳಾಂತರಿಸಲಾಯಿತು.

ಪೂಜ್ಯಪಾದ ಸಂತಶ್ರಿ ಅಸಾರಾಮ ಬಾಪು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದ ನಂತರ, ಅಪಾರ ಸಂಖ್ಯೆಯಲ್ಲಿ ಅವರ ಭಕ್ತರು ಇಲ್ಲಿ ಸೇರಿದ್ದರು.