ಹಿಂದೂದ್ವೇಷಿ ಅಮೆಝಾನ್ ಜೊತೆಗಿನ ಎಲ್ಲ ಒಪ್ಪಂದಗಳನ್ನು ರದ್ದುಪಡಿಸಿ ಎಂದು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ? ಸರಕಾರಕ್ಕೆ ಅದು ತಿಳಿಯುವುದಿಲ್ಲವೇ? ಎಂಬ ಪ್ರಶ್ನೆಯು ಹಿಂದೂಗಳಲ್ಲಿ ಮೂಡುತ್ತಿದೆ!
ಮುಂಬೈ : ಅಮೆಝಾನ್ ಜೊತೆಗಿನ ಎಲ್ಲ ಒಪ್ಪಂದಗಳನ್ನು ರದ್ದುಪಡಿಸಬೇಕು ಮತ್ತು ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಸುತ್ತೋಲೆ ಕಳಿಸಬೇಕು. ಇದರ ಜೊತೆಗೆ ‘ಓಟಿಟಿ’ ಆಪ್ ಗಳಲ್ಲಿರುವ ಕಾರ್ಯಕ್ರಮಗಳನ್ನು ನಿಯಂತ್ರಣಕ್ಕೊಳಪಡಿಸಲು ಸರಕಾರವು ಕಾನೂನು ತರಬೇಕು; ಮತ್ತು ಅಮೆಝಾನ್ ಮಾಡಿರುವ ಸಂಶಯಾಸ್ಪದ ವ್ಯವಹಾರಗಳ ಸವಿಸ್ತಾರ ವಿಚಾರಣೆಯನ್ನು ಮಾಡಲು ಸಮಿತಿಯನ್ನು ನೇಮಿಸಬೇಕು ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಕೇಂದ್ರಿಯ ಗೃಹನಿರ್ಮಾಣ ಮತ್ತು ನಾಗರಿಕ ಖಾತೆಯ ರಾಜ್ಯಮಂತ್ರಿ ಹರದೀಪಸಿಂಗ ಪುರಿ ಮತ್ತು ಸಹಸಚಿವರಿಗೆ ನಿವೇದನೆಯನ್ನು ಕಳಿಸಿದ್ದಾರೆ.
ಹಿಂದೂ ವಿಧಿಜ್ಞ ಪರಿಷತ್ತಿನ ನಿವೇದನೆಯಲ್ಲಿ …
೧. ಅಮೇಝಾನ್ ನ ಹತ್ತಿರ ದಿನಸಿ ಸಾಮಾಗ್ರಿಗಳಿಂದ ಹಿಡಿದು ಚಲನಚಿತ್ರಗಳು, ವೆಬ್ ಸಿರೀಸ್, ಪುಸ್ತಕಗಳು, ಆಡಿಯೋ ಪುಸ್ತಕಗಳು ಮುಂತಾದವುಗಳನ್ನು ಮಾರಾಟ ಮಾಡಲು ದೇಶದಾದ್ಯಂತ ವಿವಿಧ ಶಾಖೆಗಳು ಅಸ್ತಿತ್ವದಲ್ಲಿವೆ. ಅಮೇಝಾನ್ ಕಂಪನಿಯು ಕೇವಲ ಭಾರತದಲ್ಲಿರುವ ವಿವಿಧ ಮಾರುಕಟ್ಟೆಗಳಲ್ಲಿ ಸ್ವತಃ ವ್ಯವಹಾರವನ್ನು ಹೆಚ್ಚಿಸುವಂತಹ ವಿದೇಶಿ ಕಂಪನಿಯಲ್ಲ. ಅದು ‘ಈಸ್ಟ್ ಇಂಡಿಯಾ ಕಂಪನಿ’ ಯ ನೆನಪನ್ನು ತರಿಸುತ್ತದೆ. ‘ಈಸ್ಟ್ ಇಂಡಿಯಾ ಕಂಪನಿ’ ಯ ಕುಟಿಲ ಕಾರಸ್ಥಾನದಿಂದ ಭಾರತವು ಸ್ವಾತಂತ್ರ್ಯವನ್ನು ಕಳೆದುಕೊಂಡು ಬ್ರಿಟಿಷ್ ಸಾಮ್ರಾಜ್ಯದ ಪಾಲಾಗಿತ್ತು.
೨. ೨೦೧೬ ರ ಸುಮಾರಿಗೆ ಭಾರತದಲ್ಲಿ ನಡೆಯುತ್ತಿದ್ದ ‘ಓಟಿಟಿ’ ಆಪ್ ನಲ್ಲಿ ಅಮೆಝಾನ್ ವಿಡಿಯೋ ಮಾರಾಟ ಮಾಡುವ ವ್ಯವಹಾರವು ಪ್ರಾರಂಭವಾಯಿತು. ಓಟಿಟಿ ಮಾರ್ಕೆಟ್ ಮೊದಲಿಗಿಂತ ದೊಡ್ಡದಾಗಿದ್ದರೂ ಭಾರತವು ಕೇವಲ ಅದರ ನಿರೀಕ್ಷಣೆಯನ್ನು ಮಾಡಿತು ವಿನಃ ಅದರ ಮೇಲೆ ನಿಯಂತ್ರಣವನ್ನು ತರಲು ಯಾವುದೇ ಕಾನೂನು ಮಾಡಲಿಲ್ಲ. ಇದು ಬಹಳ ಆಶ್ಚರ್ಯಕರ ಹಾಗೂ ಗಂಭೀರವಾದ ವಿಷಯವಾಗಿದೆ. ಈ ಓಟಿಟಿ ಆಪ್ ನಲ್ಲಿ ಪ್ರದರ್ಶಿಸಲಾಗುವ ವಿಡಿಯೋಗಳನ್ನು ಸಿನಿಮೆಟ್ರೋಗ್ರಾಫ್ ಆಕ್ಟ್ ಗನುಸಾರ ಸೆನ್ಸಾರ್ ಮಾಡುವುದು ಅಪೇಕ್ಷಿತವಿತ್ತು.
೩. ಅಮೆಝಾನ್ www.primevideo.com ಜಾಲತಾಣದಿಂದ ಅಮೆಝಾನ್ ಪ್ರೈಮ್ ವಿಡಿಯೋ ಎಂಬ ಕಂಪನಿಯ ಮೂಲಕ ವಿಡಿಯೋ ಮಾರಾಟವನ್ನು ಪ್ರಾರಂಭಿಸಿತು. ಅದರ ಮೂಲಕ ಅದು ತಾಂಡವ, ಫೆಮಿಲಿ ಮ್ಯಾನ್, ಮಿರ್ಜಾಪುರ ಭಾಗ ೧ ಮತ್ತು ೨, ಮೆಡಮ್ ಸೆಕ್ರೆಟರಿ ಮುಂತಾದ ವಿವಾದಾತ್ಮಕ ವೆಬ್ ಸಿರೀಸ್ ಗಳನ್ನು ಪ್ರದರ್ಶಿಸುತ್ತಿದೆ. ಹಾಗಾಗಿ ಅಮೆಝಾನ್ ನ ವಿರುದ್ಧ ವೆಬ್ ಸಿರೀಸ್ ಮತ್ತು ವಿಡಿಯೋಗಳ ಬಗ್ಗೆ ಜನರು ರಸ್ತೆಗಿಳಿದು ಆಂದೋಲನ ಮಾಡಿ, ಸಾಮಾಜಿಕ ಮಾಧ್ಯಮಗಳಿಂದ ಟೀಕೆ ಮುಂತಾದವುಗಳ ಮೂಲಕ ವಿರೋಧಿಸಿದರು. ಅನೇಕ ಶಾಸಕರು ಸಹ ಸರಕಾರಕ್ಕೆ ಪತ್ರ ಬರೆದಿದ್ದಾರೆ.
೪. ಅಮೆಝಾನ್ ಮಾರಾಟ ಮಾಡುತ್ತಿರುವ ಅಸಂಖ್ಯಾತ ಉತ್ಪಾದನೆಗಳಿಂದ ಸಹ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲಾಗುತ್ತದೆ. ಇನ್ನೊಂದೆಡೆ ಸರಕಾರವು ಅಮೆಝಾನ್ ಜೊತೆಗೆ ಸಾಮರಸ್ಯದ ಒಪ್ಪಂದಗಳನ್ನು ಮಾಡಿಕೊಂಡು ಅಮೆಝಾನ್ ನ ಗ್ರಾಹಕವರ್ಗವನ್ನು ತಯಾರು ಮಾಡುತ್ತಿದೆ. ಸಾಮರಸ್ಯದ ಒಪ್ಪಂದದ ಮೂಲಕ ಅಮೆಝಾನ್‌ಗೆ ನಮ್ಮ ಸರಕಾರದ ಸಹಾಯದಿಂದ ಉತ್ಪಾದನೆಗಳನ್ನು ಮಾರಾಟ ಮಾಡಲು ಸಹಾಯವಾಗುತ್ತಿದೆ. ಇದರ ಮೂಲಕ ಅವರ ಬೊಕ್ಕಸ ತುಂಬುತ್ತಿದೆ. ಶ್ರೀ ಯೋಗೇಂದ್ರ ಸಿಂಹ, ಸಂಚಾಲಕರು (ಎನ್.ಯು.ಎಲ್.ಎಮ್.) ಇವರು ಒಪ್ಪಂದದ ಕಾರ್ಯವಾಹಿಗಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಮಿಶನ್ ಸಂಚಾಲಕರಿಗೆ ದಿಶಾನಿರ್ದೇಶವನ್ನು ನೀಡಿದ್ದಾರೆ, ಅದು ಅಮೆಝಾನ್ ಗೆ ಆಡಳಿತದ ಸಹಾಯದಿಂದ ಉತ್ಪಾದನೆಗಳ ಮಾರಾಟಕ್ಕೆ ಅನುಮತಿ ನೀಡುತ್ತದೆ.
೫. ಅಮೆಝಾನ್ ನ ಹಿಂದೂ ವಿರೋಧಿ ಮತ್ತು ದೇಶದ್ರೋಹಿ ಕಾರ್ಯಗಳತ್ತ ದುರ್ಲಕ್ಷ್ಯ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸುವತ್ತ ಭಾರತವು ಏಕೆ ದುರ್ಲಕ್ಷ್ಯ ಮಾಡುತ್ತಿದೆ ಎಂಬ ಪ್ರಶ್ನೆಯು ಮೂಡುತ್ತಿದೆ. ಅಮೆಝಾನ್ ನ ವಿಷಯದಲ್ಲಿ ಯೋಗ್ಯವಾದ ಹೆಜ್ಜೆಯನ್ನಿಟ್ಟು ಸರಕಾರವು ಈ ಪ್ರಶ್ನೆಗೆ ಉತ್ತರವನ್ನು ನೀಡಬೇಕು.