‘ಗಂಗಾಜಲ ವಿವಿಧ ವಿಷಾಣುಗಳ ಹರಡುವಿಕೆಯಿಂದ ಮುಕ್ತಿ ನೀಡುತ್ತದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ! – ನ್ಯಾಯವಾದಿ ಅರುಣಕುಮಾರ ಗುಪ್ತಾ, ಉತ್ತರಪ್ರದೇಶ
ಮುಂಬೈ – ಯಾವ ಸಮಯದಲ್ಲಿ ಯಾವ ನದಿಯಲ್ಲಿ ಸ್ನಾನ ಮಾಡುವುದರಿಂದ ಲಾಭವಾಗುತ್ತದೆ, ಇದರ ಬಗ್ಗೆ ಭಾರತೀಯ ಋಷಿಮುನಿಗಳಿಗೆ ಸಂಪೂರ್ಣ ಜ್ಞಾನವಿತ್ತು. ಅದಕ್ಕಾಗಿಯೇ ಅವರು ಬಹಳ ಆಳವಾದ ಅಧ್ಯಯನ ಮಾಡಿದ ನಂತರ ಗಂಗೆಯಲ್ಲಿ ಹಬ್ಬದ ಸಮಯದಲ್ಲಿ ಸ್ನಾನ ಮಾಡಲು ಹೇಳಿದ್ದರು. ಮಾಘ ಮಕರ ಸಂಕ್ರಾಂತಿಯ ನಂತರ ಸೂರ್ಯ ಮಕರರಾಶಿಗೆ ಹೋಗುತ್ತದೆ. ಮಕರರೇಖೆಯು ಪ್ರಯಾಗ ರಾಜಗೆ ಎಲ್ಲಕ್ಕಿಂತ ಹೆಚ್ಚು ಹತ್ತಿರದಲ್ಲಿದೆ. ಆದ್ದರಿಂದ ಈ ಸಮಯದಲ್ಲಿ ಗಂಗಾ ನದಿಯಲ್ಲಿ ಬೀಳುವ ಸೂರ್ಯನ ಕಿರಣಗಳಲ್ಲಿ ಅತೀ ನೀಲ ಕಿರಣಗಳು ಹೆಚ್ಚು ಇರುತ್ತದೆ. ಅದರಿಂದ ಲಾಭವಾಗಿ ಅದರಲ್ಲಿ ಸ್ನಾನ ಮಾಡುವವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ನದಿಯಲ್ಲಿ ಸ್ನಾನ ಮಾಡುವ ಪರಿಕಲ್ಪನೆಯು ಪಾಶ್ಚಾತ್ಯರಲ್ಲಿ ಇಲ್ಲ. ಗಂಗಾ ನೀರಿನಲ್ಲಿ ‘ಬ್ಯಾಕ್ಟೇರಿಯೊ ಫೇಜ್ ಎಂಬ ಹೆಸರಿನ ವಿಷಾಣು ಇದ್ದು ಅದು ಶ್ವಸನಾಂಗವ್ಯೂಹದ ಮೇಲೆ ಹಲ್ಲೆ ಮಾಡುವ ಕೊರೋನಾದಂತಹ ವಿವಿಧ ವಿಷಾಣುಗಳನ್ನು ಕೊಲ್ಲುತ್ತದೆ ಎಂದು ಸಾಬೀತಾಗಿದೆ. ಆದ್ದರಿಂದ ‘ಗಂಗಾಜಲ ಕೊರೋನಾದಂತಹ ವಿವಿಧ ವಿಷಾಣುಗಳ ಹರಡುವಿಕೆಯನ್ನು ನಿವಾರಿಸುತ್ತದೆ, ಅದೇರೀತಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಉಪಯುಕ್ತವಾಗಿದೆ, ಎಂಬ ಅಭ್ಯಾಸ ಪೂರ್ಣ ನಿಷ್ಕರ್ಷವನ್ನು ಉತ್ತರ ಪ್ರದೇಶದ ಅಲಾಹಾಬಾದ್ ಉಚ್ಚ ನ್ಯಾಯಾಲಯದ ಮೂಲಕ ನೇಮಕವಾದ ನ್ಯಾಯಮಿತ್ರ ನ್ಯಾಯವಾದಿ ಅರುಣಕುಮಾರ್ ಗುಪ್ತಾ ಮಂಡಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ‘ಸಾಂಕ್ರಾಮಿಕ ಮತ್ತು ಮಾಲಿನ್ಯಗಳ ಮೇಲೆ ಉಪಾಯ : ಸನಾತನ ಪರಂಪರೆ ಕುರಿತು ವಿಶೇಷ ‘ಆನ್‌ಲೈನ್ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು. ಈ ವಿಶೇಷ ‘ಆನ್‌ಲೈನ್ ಚರ್ಚಾಕೂಟವನ್ನು ಜೂನ್ ೧೧ ರಂದು ರಾತ್ರಿ ೮ ರಿಂದ ೯.೩೦ ಸಮಯದಲ್ಲಿ ಆಯೋಜಿಸಲಾಗಿತ್ತು.
ಈ ಚರ್ಚಾಕೂಟದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ‘ಗ್ರೀನ್ ಇಂಡಿಯಾ ಫೌಂಡೇಶನ್ ಟ್ರಸ್ಟ್ನ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಜಗದೀಶ ಚೌಧರಿ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅದೇರೀತಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಭಾಗವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ಸಮನ್ವಯಕರಾದ ಶ್ರೀ. ಕಾರ್ತಿಕ ಸಾಳುಂಖೆಯವರು ಚರ್ಚಾಕೂಟದ ಸೂತ್ರಸಂಚಾಲನೆಯನ್ನು ಮಾಡಿದರು.
ನ್ಯಾಯವಾದಿ ಗುಪ್ತಾ ಅವರು ತಮ್ಮ ಮಾತನ್ನು ಮುಂದುವರಿಸುತ್ತ, ಕುಂಭಮೇಳದಲ್ಲಿ ಯಾವಾಗ ಹಿಂದೂಗಳು ನದಿ ಸ್ನಾನ ಮಾಡುತ್ತಾರೆಯೋ, ಆಗ ಹಿಂದೂಗಳ ದೇಹದಲ್ಲಿನ ಪ್ರೋಟೀನ್ ಇನ್ನೊಬ್ಬರ ದೇಹಕ್ಕೆ ಪ್ರವೇಶಿಸುತ್ತದೆ. ಇದರಿಂದ ದೇಹದಲ್ಲಿ ವಿಶಿಷ್ಟ ಪ್ರಕ್ರಿಯೆಯಾಗಿ ಹಿಂದೂಗಳ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಇದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಅಧ್ಯಯನದಿಂದ ಸಾಬೀತಾಗಿದೆ. ‘ಸ್ವದೇಶಿ ಮತ್ತು ಅಗ್ಗದ ಸರಕುಗಳ ಉತ್ಪಾದನೆ, ಎಂದು ಪ್ರಧಾನಮಂತ್ರಿಗಳು ಕರೆ ನೀಡಿದ್ದಾರೆ. ಗಂಗಾಜಲವು ಒಂದು ಔಷಧಿಯಾಗಿರುವುದರಿಂದ ಅದರಿಂದ ಸ್ವದೇಶಿ ಮತ್ತು ಅಗ್ಗದ ಔಷಧಿಯನ್ನು ಸುಲಭವಾಗಿ ತಯಾರಿಸಬಹುದು. ಆದ್ದರಿಂದ ಗಂಗಾಜಲದ ಔಷಧೀಯ ಗುಣಗಳನ್ನು ಅಧ್ಯಯನ ಮಾಡಲು ಸ್ವತಂತ್ರ ಅಧ್ಯಯನ ಸಮಿತಿಯನ್ನು ರಚಿಸಬೇಕು ಎಂದೂ ನ್ಯಾಯವಾದಿ ಅರುಣಕುಮಾರ ಗುಪ್ತಾ ಆಗ್ರಹಿಸಿದ್ದಾರೆ.
ಪ್ರಕೃತಿಯ ಶೋಷಣೆಯ ಪ್ರವೃತ್ತಿಯೇ ಮಾನವನ ಅವನತಿಗೆ ಕಾರಣವಾಗಿದೆ ! – ಜಗದೀಶ ಚೌಧರಿ
ಸಂಚಾರ ನಿಷೇಧದಿಂದಾಗಿ ನದಿಗಳು ಬೃಹತ್ ಪ್ರಮಾಣದಲ್ಲಿ ಶುದ್ಧ ವಾಗಿದೆ, ಎಂದು ಹೇಳಲಾಗುತ್ತದೆ; ಆದರೆ ನಾವು ಈ ಸ್ವಚ್ಛತೆಯ ತುಲನೆ ಯನ್ನು ನಾವು ಕಳೆದ ೪-೫ ವರ್ಷಗಳ ಹಿಂದಿನ ಮಾಲಿನ್ಯದೊಂದಿಗೆ ಮಾತ್ರ ಹೋಲಿಸುತ್ತಿದ್ದೇವೆ. ೧೯೪೭ ಅಥವಾ ಅದಕ್ಕಿಂತ ಹಿಂದಿನ ನದಿಗಳ ಸ್ಥಿತಿಯ ಅಧ್ಯಯ ಮಾಡಿದರೆ ಈ ಮಾಲಿನ್ಯ ನಗಣ್ಯವಾಗಿದೆ ಎಂದು ಗಮನಕ್ಕೆ ಬರುತ್ತದೆ. ಯಮುನಾ ನದಿಯು ದೆಹಲಿಗೆ ಪ್ರವೇಶಿಸುವ ಮೊದಲು ಸ್ವಚ್ಛವಾಗಿದೆ, ಆದರೆ ದೆಹಲಿಯಲ್ಲಿ ದೊಡ್ಡ ಪ್ರಮಾಣದ ನಗರಗಳ ತ್ಯಾಜ್ಯ, ಕಾರ್ಖಾನೆ ಗಳ ಕಲುಷಿತ ನೀರು ಸೇರಿದ್ದರಿಂದ ಅದು ಕಲುಷಿತಗೊಂಡಿದೆ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಿ ಪ್ರಕೃತಿಯನ್ನು ಪೋಷಿಸುವ ಬದಲು ಪ್ರಕೃತಿಯ ಶೋಷಣೆ ಮಾಡಿದ್ದೇವೆ. ಈ ಶೋಷಣೆಯೇ ಮಾನವನ ಅವನತಿಗೆ ಕಾರಣವಾಗಿದೆ, ಎಂದು ‘ಗ್ರೀನ್ ಇಂಡಿಯಾ ಫೌಂಡೇಶನ್ ಟ್ರಸ್ಟ್ನ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಜಗದೀಶ ಚೌಧರಿಯವರು ಈ ವೇಳೆ ಹೇಳಿದರು.
ಭಾರತೀಯರು ತಮ್ಮ ಗ್ರಾಮವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ಸಮೃದ್ಧಗೊಳಿಸಬೇಕು ! – ಸದ್ಗುರು (ಡಾ) ಚಾರುದತ್ತ ಪಿಂಗಳೆ
ಇಂದು ಪಾಶ್ಚಿಮಾತ್ಯ ಭೋಗವಾದಿ ಸಿದ್ಧಾಂತದಿಂದಾಗಿ ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳು ಉದ್ಭವಿಸಲು ಮುಖ್ಯ ಕಾರಣವಾಗಿವೆ. ಈ ಸಮಸ್ಯೆಗಳು ಪರಿಸರವನ್ನು ಹಾನಿಗೊಳಿಸಿರುವುದರಿಂದ ಅಂತರರಾಷ್ಟ್ರೀಯ ಪರಿಸರ ದಿನವನ್ನು ಆಚರಿಸುವ ಸಮಯ ಬಂದಿದೆ. ಇದನ್ನು ತೊಡೆದುಹಾಕಲು, ನಾವು ಪ್ರಾಚೀನ ಭಾರತೀಯ ಋಷಿಮುನಿಗಳು ಹಾಕಿದ ಪರಂಪರೆಗಳತ್ತ ಹೊರಳಬೇಕಾಗಿದೆ. ನಮ್ಮ ಗ್ರಾಮವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ನಾವು ಸಮೃದ್ಧಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆಯವರು ಹೇಳಿದರು.
ಹಿಂದೂ ಸಂಸ್ಕೃತಿಯೇ ಜಗತ್ತಿಗೆ ಭರವಸೆಯ ಆಶಾಕಿರಣ ! – ಚೇತನ ರಾಜಹಂಸ, ಸನಾತನ ಸಂಸ್ಥೆ
ಸನಾತನ ಧರ್ಮ ಯಾವಾಗಲೂ ಪರಿಸರ ಸ್ನೇಹಿಯಾಗಿದೆ. ಪಾಶ್ಚಾತ್ಯರು ಹಸ್ತಲಾಘವ ಮತ್ತು ಮಾಂಸಾಹಾರದ ಅಯೋಗ್ಯ ಅಭ್ಯಾಸಗಳನ್ನು ಬಿಟ್ಟು, ಈಗ ನಮಸ್ಕಾರ, ಸಸ್ಯಾಹಾರ ಮತ್ತು ಅಗ್ನಿಸಂಸ್ಕಾರ ಇಂತಹ ವಿಷಯಗಳತ್ತ ಮುಖ ಮಾಡುತ್ತಿದ್ದಾರೆ. ಭಾರತೀಯರ ವಿವಿಧ ಆಹಾರ ಮತ್ತು ಆಚಾರ ಪದ್ಧತಿಗಳು ಇಂದು ಪಾಶ್ಚಾತ್ಯರನ್ನು ಆಕರ್ಷಿಸುತ್ತಿವೆ. ರೋಗರುಜಿನೆಗಳಿಂದ ರಕ್ಷಿಸಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಭಾರತೀಯ ಸಂಸ್ಕೃತಿಯಲ್ಲಿ ಪ್ರತಿದಿನ ‘ಅಗ್ನಿಹೋತ್ರ ಪರಿಕಲ್ಪನೆ ಇದೆ. ‘ಅಗ್ನಿಹೋತ್ರದಿಂದ ನಿರ್ಮಾಣವಾದ ಸೂಕ್ಷ್ಮ ರಕ್ಷಣಾತ್ಮಕ ಕವಚಕ್ಕೆ ವಿಕಿರಣಗಳಿಂದಲೂ ರಕ್ಷಿಸುವ ಸಾಮರ್ಥ್ಯವಿದೆ. ಆದ್ದರಿಂದ ಇಂದು ಜಗತ್ತಿಗೆ ಹಿಂದೂ ಸಂಸ್ಕೃತಿಯೇ ಆಶಾಕಿರಣವಾಗಿದೆ, ಎಂದು ಹೇಳುತ್ತಾ ಹಿಂದೂ ಸಂಸ್ಕೃತಿಯನುಸಾರ ಆಚರಣೆಯನ್ನು ಮಾಡಬೇಕು ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಹೇಳಿದರು.
ಈ ಆನ್‌ಲೈನ್ ವಿಶೇಷ ಚರ್ಚಾಕೂಟವನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್ ಲಿಂಕ್ ಮೂಲಕ ಪ್ರಸಾರ ಮಾಡಲಾಯಿತು. ಇದರಿಂದ ಈ ವಿಷಯವು 74,000 ಕ್ಕೂ ಹೆಚ್ಚು ಜನರ ವರೆಗೆ ತಲುಪಿದರೆ, 31,000 ಕ್ಕೂ ಹೆಚ್ಚು ಜನರು ಚರ್ಚಾಕೂಟವನ್ನು ವೀಕ್ಷಿಸಿದರು.
ಈ ಚರ್ಚಾಕೂಟದ ನಿಮಿತ್ತ # Scientific_Sanatan_Dharma ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಈ ವಿಷಯದ ಬಗ್ಗೆ ೧ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳು ಬಂದವು. ಇದರಿಂದ ಈ ವಿಷಯಕ್ಕೆ ಬೃಹತ್ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇದರಿಂದ ಕಂಡುಬರುತ್ತದೆ.