ನಾವು ಗಿಡಮೂಲಿಕೆಯ ಔಷಧಿಯಿಂದ ಆಯುರ್ವೇದ ಲಸಿಕೆಯನ್ನು ತಯಾರಿಸುತ್ತಿದ್ದೇವೆ ! – ಯೋಗಋಷಿ ರಾಮದೇವ ಬಾಬಾ

ನವದೆಹಲಿ : ಪತಂಜಲಿಯವರಿಂದ ಕರೋನಾ ರೋಗಾಣುಗಳ ಮೇಲೆ ಗಿಡಮೂಲಿಕೆಯ ಔಷಧಿಯಿಂದ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಅಶ್ವಗಂಧಾ ಮತ್ತು ಗಿಲೋಯ ಮೂಲಕ ಕರೋನಾ ರೋಗಾಣುವಿನ ಮೇಲೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು, ಎಂದು ಯೋಗಋಷಿ ರಾಮದೇವ ಬಾಬಾ ಹೇಳಿದ್ದಾರೆ.

ಯೋಗಋಷಿ ರಾಮದೇವ ಬಾಬಾ ತಮ್ಮ ಮಾತನ್ನು ಮುಂದುವರೆಸುತ್ತ,

೧. ಮನುಷ್ಯರಿಗೆ ಅಪಾಯಕಾರಿಯಾದ ಕರೋನಾಗೆ ಚಿಕಿತ್ಸೆ ನೀಡುವ ಶಕ್ತಿ ಆಯುರ್ವೇದದಲ್ಲಿದೆ. ಇದು ರೋಗದ ಮೂಲದಿಂದ ಗುಣಪಡಿಸುತ್ತದೆ.

೨. ಕರೋನಾ ರೋಗಾಣು ದೇಹದೊಳಗೆ ಪ್ರವೇಶಿಸಿದ ನಂತರ ದೇಹದ ಸಂಪೂರ್ಣ ರಚನೆಯನ್ನು ಹಾಳು ಮಾಡುತ್ತದೆ. ಈ ರೋಗಾಣುಗಳು ದ್ವಿಗುಣಗೊಳ್ಳುತ್ತಾ ಹೋಗುತ್ತದೆ ಹಾಗೂ ಅದರಿಂದ ಕೋಶಗಳ ಮೇಲೆ ಹೆಚ್ಚೆಚ್ಚು ಪರಿಣಾಮವಾಗುತ್ತದೆ. ಸೋಂಕಿನ ಈ ಕೊಂಡಿಯನ್ನು ಮುರಿಯಲು ಗಿಲೋಯ್ ಇದು ಶೇ. ೧೦೦ ರಷ್ಟು ಪರಿಣಾಮಕಾರಿಯಾಗಿದೆ. ಪತಂಜಲಿಯು ಸಿದ್ಧ ಪಡಿಸಿದ ಔಷಧಿಯಿಂದ ಈ ರೋಗಾಣುಗಳ ಮೇಲೆ ಪರೀಕ್ಷೆಗಳು ನಡೆಯುತ್ತಿವೆ. ಅದರ ಫಲಿತಾಂಶ ಶೀಘ್ರದಲ್ಲೇ ಬರಲಿದೆ. ಪತಂಜಲಿಯ ಸಂಶೋಧನೆ ಪೂರ್ಣಗೊಂಡಿದ್ದು ಈ ಸಂಶೋಧನೆಯ ನಿಷ್ಕರ್ಷವನ್ನು ಶೀಘ್ರದಲ್ಲೇ ಜಗತ್ತಿನೆದುರಿಗೆ ಮಂಡಿಸಲಾಗುವುದು ಎಂದು ಹೇಳಿದರು.