ನಕ್ಸಲರಿಗೆ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ಬಂಧನ

ಇಂತಹ ಗೃಹವಂಚಕರ ವಿರುದ್ಧ ಸರಕಾರ ತಕ್ಷಣ ಮೊಕದ್ದಮೆಯನ್ನು ಹೂಡಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಪ್ರಯತ್ನಿಸಬೇಕು !

ಸುಕಮಾ (ಛತ್ತೀಸಗಡ) – ನಕ್ಸಲರಿಗೆ ಮದ್ದು-ಗುಂಡಗಳನ್ನು ಸರಬರಾಜು ಮಾಡಿದ ಪ್ರಕರಣದಲ್ಲಿ ಛತ್ತೀಸಗಡ ಪೊಲೀಸರ ಅಧಿಕ್ಷಕ ಆನಂದ ಜಾಟವ್ ಮತ್ತು ಪೊಲೀಸ ಕಾನ್ಸಟೇಬಲ್ ಸುಭಾಷ್ ಸಿಂಗ್ ಇವರನ್ನು ಬಂಧಿಸಲಾಗಿದೆ. ಅವರೊಂದಿಗೆ ಮನೋಜ ಶರ್ಮಾ ಮತ್ತು ಹರಿಶಂಕರ ಇಬ್ಬರನ್ನೂ ಬಂಧಿಸಲಾಗಿದೆ. ಅವರು ಪೊಲೀಸರಿಂದ ಮದ್ದು-ಗುಂಡುಗಳನ್ನು ಖರೀದಿಸಲು ಬಂದಿದ್ದರು. ಈ ಹಿಂದೆ ಪೊಲೀಸರು ನಕ್ಸಲರಿಗೆ ಎರಡು ಬಾರಿ ಮದ್ದು-ಗುಂಡುಗಳನ್ನು ಮಾರಾಟ ಮಾಡಿದ್ದರು. ಕಾನ್ಸಟೇಬಲ್ ಸುಭಾಷ್ ಸಿಂಗ್ ಶಸ್ತ್ರಾಗಾರದಲ್ಲಿ ನೇಮವಾಗಿದ್ದ.

ಇದಕ್ಕೂ ಮುನ್ನ ೨೦೧೮ ರಲ್ಲಿ ೬ ಕ್ಕೂ ಹೆಚ್ಚು ಪೊಲೀಸರು ನಕ್ಸಲರಿಗೆ ಮದ್ದು-ಗುಂಡು ಮಾರಾಟ ಮಾಡಿದ ಘಟನೆ ನಡೆದಿತ್ತು. ಆ ಸಮಯದಲ್ಲಿ ಅವರ ಮೇಲೆ ಕೇವಲ ವಿಭಾಗೀಯ ಕ್ರಮ ಕೈಗೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.