ಶ್ರೀರಾಮ ಮಂದಿರ ದೇಣಿಗೆ ಹಣ ಕಳ್ಳತನ ಪ್ರಕರಣ

ಅಯೋಧ್ಯಾ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ದೇಣಿಗೆ ಹಣವನ್ನು ಎಣಿಕೆ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅಂದಾಜು 35 ರಿಂದ 40 ಜನರು ದೇಣಿಗೆಯ ಹಣವನ್ನು ಎಣಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲಿ ಹೆಚ್ಚಿನವರ ಕೆಲಸ ಶಂಕಾಸ್ಪದವಾಗಿದ್ದರಿಂದ ಸದ್ಯ ಎಲ್ಲರನ್ನೂ ತೆರವುಗೊಳಿಸಲಾಗಿದೆ ಹಾಗೂ ಬ್ಯಾಂಕ್ ಹೊಸ ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರಸ್ತುತ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ದೇಣಿಗೆ ಎಣಿಕೆ ಕಾರ್ಯ ನಡೆಯುತ್ತಿದೆ.
ಅಯೋಧ್ಯೆ ಮಂದಿರವು ‘ಟ್ರಸ್ಟ್’ ವ್ಯವಸ್ಥೆಯನ್ನು ಬದಲಿಸಿ ಸಾಂಪ್ರದಾಯಿಕ ‘ಸಾಧು-ಕೇಂದ್ರಿತ’ ವ್ಯವಸ್ಥೆಯಾಗಿ ರೂಪಾಂತರಗೊಳ್ಳಬೇಕು! – ಮಹಂತ್ ಧರ್ಮದಾಸ್ ಬಾಬಾ

ಶ್ರೀರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ರಾಮಲಲ್ಲಾ ಪರವಾಗಿ ಈ ಹಿಂದೆ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಹನುಮಾನ್‌ಗಢಿ ಮಂದಿರದ ಮಹಂತರಾದ ಧರ್ಮದಾಸ್ ಬಾಬಾ ಅವರು ಮಾತನಾಡಿ, “ಯಾರು ಈ ಜಿಗುಪ್ಸೆ ಹುಟ್ಟಿಸುವ ಕೆಲಸ ಮಾಡಿದ್ದಾರೋ, ಅವರಿಗೆ ಎಂತಹ ಶಿಕ್ಷೆ ನೀಡಿದರೂ ಕಡಿಮೆಯೇ. ಇಡೀ ದೇಶವೇ ಈ ಕೆಲಸವನ್ನು ಖಂಡಿಸಿದೆ. ಈ ಪ್ರಕರಣದ ತನಿಖೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಮುಖ್ಯಮಂತ್ರಿ ಅವರು ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ,” ಎಂದು ಹೇಳಿದ್ದಾರೆ. ಅಯೋಧ್ಯೆ ಮಂದಿರ ವ್ಯವಸ್ಥೆಯು ‘ಟ್ರಸ್ಟ್’ ಆಗಿದ್ದು, ಅದರ ಬದಲಾಗಿ ಸಾಂಪ್ರದಾಯಿಕ ‘ಸಾಧು-ಕೇಂದ್ರಿತ’ ವ್ಯವಸ್ಥೆಯಾಗಿ ರೂಪಾಂತರಗೊಳ್ಳಬೇಕೆಂಬ ಇಚ್ಛೆಯನ್ನು ಮಹಂತ್ ಧರ್ಮದಾಸ್ ಬಾಬಾ ವ್ಯಕ್ತಪಡಿಸಿದ್ದಾರೆ.
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi