
ನವದೆಹಲಿ – ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ಈ 3 ರಾಜ್ಯಗಳ ವ್ಯಾಪ್ತಿಗೆ ಬರುವ ಪಶ್ಚಿಮ ಘಟ್ಟದ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕೇಂದ್ರ ಸರಕಾರ ಸಿದ್ಧತೆ ಆರಂಭಿಸಿದೆ.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ಇಸ್ರೋ’ದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅವರು ಸುಮಾರು 12 ವರ್ಷಗಳ ಹಿಂದೆ ಸಲ್ಲಿಸಿದ ವರದಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ಈ 6 ರಾಜ್ಯಗಳ ವ್ಯಾಪ್ತಿಯ ಒಟ್ಟು 56 ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಪ್ರಸ್ತಾವನೆಯನ್ನು ನೀಡಿದ್ದರು. ಆಗ ಪ್ರಾಥಮಿಕ ಅಧಿಸೂಚನೆಯನ್ನು ಹೊರತುಪಡಿಸಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಶೀಘ್ರದಲ್ಲೇ ಕನಿಷ್ಠ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ಈ ಮೂರು ರಾಜ್ಯಗಳ ಪಶ್ಚಿಮ ಘಟ್ಟದ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಘೋಷಿಸಲು ಸರಕಾರ ಸಿದ್ಧತೆ ಆರಂಭಿಸಿದೆ.
ಇಲ್ಲಿಯವರೆಗೆ ಸಂಬಂಧಪಟ್ಟ ಎಲ್ಲಾ 6 ರಾಜ್ಯಗಳಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಪಶ್ಚಿಮ ಘಟ್ಟದ ಪ್ರದೇಶವನ್ನು ಸೂಕ್ಷ್ಮ ಎಂದು ಘೋಷಿಸಲು ಒಪ್ಪಿಗೆ ಸೂಚಿಸಲಾಗಿಲ್ಲ. ಕೇವಲ ಗುಜರಾತ್ ಮಾತ್ರ ಈ ಅಧಿಸೂಚನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದೆ. ಮಹಾರಾಷ್ಟ್ರವು ಇನ್ನೂ ಈ ವಿಷಯದಲ್ಲಿ ಸಂಪೂರ್ಣ ಒಪ್ಪಿಗೆ ಸೂಚಿಸಿಲ್ಲ. 2 ಸಾವಿರದ 515 ಗ್ರಾಮಗಳಲ್ಲಿ ಈ ಪ್ರದೇಶ ವ್ಯಾಪಿಸಿದ್ದು, ಅದರಲ್ಲಿ 378 ಗ್ರಾಮಗಳನ್ನು ಕೈಬಿಡಬೇಕೆಂದು ರಾಜ್ಯ ಸರಕಾರವು ನಿಲುವು ವ್ಯಕ್ತಪಡಿಸಿದೆ. ಕರ್ನಾಟಕ ಮತ್ತು ಕೇರಳ ಈ ವಿಷಯದಲ್ಲಿ ಒಪ್ಪಿಗೆ ನೀಡಿಲ್ಲ.
ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದರೆ ಏನಾಗುತ್ತದೆ?
ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದರೆ, ಈ ಪ್ರದೇಶದಲ್ಲಿ ಹೊಸದಾಗಿ ನಡೆಯುವ ಗಣಿಗಾರಿಕೆ ಮತ್ತು ಸಂಬಂಧಿತ ಯೋಜನೆಗಳು, ಉಷ್ಣ ವಿದ್ಯುತ್ ಸ್ಥಾವರಗಳು (ಥರ್ಮಲ್ ಪವರ್ ಪ್ಲಾಂಟ್ಸ್), ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಶ್ರೇಣಿಯ ಕೈಗಾರಿಕೆಗಳು, 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣವಿರುವ ಹೊಸ ಕಟ್ಟಡಗಳು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಕಟ್ಟಡಗಳ ಹೆಚ್ಚುವರಿ ನಿರ್ಮಾಣದ ಮೇಲೆ ಸಂಪೂರ್ಣ ನಿರ್ಬಂಧವಿರುತ್ತದೆ.
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಮನೆ ಮೇಲೆ ಬಂದಿದ್ದ ರೆಂಬೆಗಳನ್ನು ತೆರವುಗೊಳಿಸದ ಕಾರಣ, ಮರ ಕಡಿಯುವ ಯತ್ನದಲ್ಲಿ ಮಹಿಳೆಯ ಸಾವು