ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು: ಪಾಕಿಸ್ತಾನದ ರಕ್ಷಣಾ ಸಚಿವರ ಭಾರತಕ್ಕೆ ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ‘ನೀರು’ ಎಂಬುದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ಅದಕ್ಕೆ ಧಕ್ಕೆ ತರುವ ದೇಶದ ವಿರುದ್ಧ ಯುದ್ಧ ಘೋಷಿಸುವುದನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಹೇಳಿಕೆ ನೀಡಿದ್ದಾರೆ. ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಭಾರತ ನೀರಿನ ಅಸ್ತ್ರವನ್ನು ಬಳಸುತ್ತಿದೆ!
ಖವಾಜಾ ಆಸಿಫ್ ಮಾತನಾಡಿ, ಭಾರತ ನೀರಿನ ಅಸ್ತ್ರವನ್ನು ಬಳಸುತ್ತಿದೆ. (ಪಾಕಿಸ್ತಾನ ಕಳೆದ ಮೂರೂವರೆ ದಶಕಗಳಿಂದ ಜಿಹಾದಿ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಅಸ್ತ್ರವಾಗಿ ಬಳಸುತ್ತಿರುವುದರಿಂದ, ಭಾರತ ಈಗ ಪ್ರತೀಕಾರ ತೀರಿಸಿಕೊಂಡರೆ ಪಾಕಿಸ್ತಾನಕ್ಕೆ ಏಕೆ ಉರಿಯುತ್ತಿದೆ? – ಸಂಪಾದಕರು). ಇದರಿಂದ ಪಾಕಿಸ್ತಾನದಲ್ಲಿ ಹರಿಯುವ ಚಿನಾಬ್ ನದಿಯ ಹರಿವಿಗೆ ಈಗ ಅಡಚಣೆಯಾಗಿದೆ. ಭಾರತದ ಈ ನದಿಯ ಸಮೀಪ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳನ್ನು ಪಾಕಿಸ್ತಾನ ಪರಿಶೀಲಿಸಿದೆ. ಅದರ ಅಡಿಯಲ್ಲಿ ಇದುವರೆಗೆ ೧೧೫ ಸ್ಥಳಗಳನ್ನು ಪರಿಶೀಲಿಸಲಾಗಿದ್ದರೂ, ಕಳೆದ ಒಂದು ವರ್ಷದ ನವೀಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನೀರನ್ನು ತಡೆಯಲು ಭಾರತವು ವೇಗವಾಗಿ ಪ್ರಯತ್ನಿಸುತ್ತಿದೆ ಎಂಬ ದೃಢ ಪುರಾವೆಗಳು ಸಿಕ್ಕರೆ ಪಾಕಿಸ್ತಾನ ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಆಸಿಫ್ ಹೇಳಿದ್ದಾರೆ.
ಭಾರತದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಪಾಕಿಸ್ತಾನಕ್ಕೆ ಹೋಗುವ ನದಿಯ ನೀರನ್ನು ೨೦೨೮ ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಇತ್ತೀಚೆಗೆ ಸುಳಿವು ನೀಡಿದ್ದರು. ಆ ಹಿನ್ನೆಲೆಯಲ್ಲಿ ಖವಾಜಾ ಆಸಿಫ್ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನಕ್ಕೆ ಪೆಟ್ಟು!
ಭಾರತವು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ, ಸದ್ಯ ಪಾಕಿಸ್ತಾನದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯು, ಅದರಲ್ಲೂ ವಿಶೇಷವಾಗಿ ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದೆ. ಸಿಂಧೂ ಕಣಿವೆಯಿಂದ ಪಾಕಿಸ್ತಾನಕ್ಕೆ ೮೦% ನೀರು ಸಿಗುತ್ತಿದ್ದು, ಇದೇ ನೀರಿನ ಮೇಲೆ ಅವಲಂಬಿತವಾಗಿರುವ ೮೦% ಭೂಮಿಯಲ್ಲಿನ ಕೃಷಿಗೂ ಭಾರಿ ಹೊಡೆತ ಬಿದ್ದಿದೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ಭಾರತದೊಂದಿಗಿನ ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ಅಗತ್ಯ ಇಲ್ಲ !
ನಾನು ಟ್ರಂಪ್ ಅವರ ಹೇಳಿಕೆಯಂತೆ ಮತ್ತು ಟ್ರಂಪ್ ನನ್ನ ಹೇಳಿಕೆಯಂತೆ ಕೆಲಸ ಮಾಡುತ್ತಿಲ್ಲ! – ನೆತನ್ಯಾಹು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆ
ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!