ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರ ಆಗ್ರಹ

ಗೌಹಾಟಿ (ಅಸ್ಸಾಂ) – ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರು ಅಜಾನ್ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅವರು, ಕಳೆದ ೫ ವರ್ಷಗಳಿಂದ ನಾನು ಶಾಸಕರ ನಿವಾಸದಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿ ಹತ್ತಿರದಲ್ಲೇ ಇರುವ ಒಂದು ಮಸೀದಿಯಿಂದ ಮುಂಜಾನೆಯಿಂದ ಸಂಜೆಯವರೆಗೆ ೫ ಬಾರಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೇಳಿಸಲಾಗುತ್ತದೆ. ಅದರ ದೊಡ್ಡ ಧ್ವನಿಯಿಂದಾಗಿ ಅಲ್ಲಿ ವಾಸಿಸುವ ಜನರು ತೀವ್ರ ತೊಂದರೆಯನ್ನು ಎದುರಿಸಬೇಕಾಗಿದೆ.
Guwahati (Assam): “The use of loudspeakers during Azaan should be limited!” – Demand by newly elected BJP MLA Diganta Kalita (@diganta68)
Why should citizens and public representatives repeatedly have to raise this issue?
If loudspeakers violate peace and disturb residents, why… pic.twitter.com/WJq5spdx6I
— Sanatan Prabhat (@SanatanPrabhat) May 19, 2026
ಈ ವಿಷಯದ ಕುರಿತಾದ ನ್ಯಾಯಾಲಯದ ತೀರ್ಪುಗಳು ಮತ್ತು ಕಾನೂನು ನಿಬಂಧನೆಗಳ ಬಗ್ಗೆ ನಾನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಈ ಇಡೀ ವಿಷಯವನ್ನು ಅಸ್ಸಾಂ ಸರಕಾರದ ಮುಂದೆ ಮಂಡಿಸಲಿದ್ದೇನೆ. ನಂಬಿಕೆ ತನ್ನ ಜಾಗದಲ್ಲಿದೆ; ಆದರೆ ಅದಕ್ಕಾಗಿ ಧ್ವನಿವರ್ಧಕಗಳ ಬಳಕೆ ಮಾಡುವುದು ಅನಿವಾರ್ಯವೇನಲ್ಲ. ಇದರಿಂದ ಇತರರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಬೇಕು, ಎಂದು ಹೇಳಿದರು.
ತಾವು ಅಜಾನ್ ವಿರುದ್ಧವಾಗಿಲ್ಲ; ತಮ್ಮ ವಿರೋಧ ಕೇವಲ ಧ್ವನಿವರ್ಧಕಗಳ ಅತಿಯಾದ ಧ್ವನಿಗೆ ಮಾತ್ರ ಎಂದು ಶಾಸಕ ಕಲಿತಾ ಅವರು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ