ಪುಣೆಯಲ್ಲಿ ೧೧ ತಿಂಗಳಲ್ಲಿ ೯೪ ಬಾಂಗ್ಲಾದೇಶಿ ನುಸುಳುಕೋರರ ಬಂಧನ!

ಪುಣೆ – ಫರಾಸ್‌ಖಾನಾ ಪೊಲೀಸರು ಬುಧವಾರ ಪೇಟೆ ಪರಿಸರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೫ ಬಾಂಗ್ಲಾದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ತನಿಖಾ ತಂಡವು ಮೇ ೧೧ರ ರಾತ್ರಿ ೧ ರಿಂದ ಬೆಳಿಗ್ಗೆ ೯ ಗಂಟೆಯ ಅವಧಿಯಲ್ಲಿ ಬುಧವಾರ ಪೇಟೆಯ ‘ರೆಡ್ ಲೈಟ್ ಏರಿಯಾ’ದಲ್ಲಿ ‘ಕೊಂಬಿಂಗ್ ಆಪರೇಷನ್’ (ಕಾರ್ಯಾಚರಣೆ) ನಡೆಸಿತು. ವಿಶೇಷವೆಂದರೆ ‘ವಲಯ ೧’ರ ಪೊಲೀಸ್ ಉಪ ಆಯುಕ್ತರಾದ ಋಷಿಕೇಶ ರಾವ್ಲೆ ಅವರು ಅಧಿಕಾರ ವಹಿಸಿಕೊಂಡ ನಂತರ ಕಳೆದ ೧೧ ತಿಂಗಳಲ್ಲಿ ಒಟ್ಟು ೯೪ ಬಾಂಗ್ಲಾದೇಶಿ ಪ್ರಜೆಗಳನ್ನು ವಿವಿಧ ಕಾರ್ಯಾಚರಣೆಗಳಲ್ಲಿ ಬಂಧಿಸಲಾಗಿದೆ. ಈ ಕ್ರಮವು ಮುಂದೆಯೂ ಹೀಗೆಯೇ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಗಡಿಯಿಂದ ನುಸುಳಿ ವೇಶ್ಯಾವಾಟಿಕೆ!

ಈ ಮಹಿಳೆಯರು ಬಾಂಗ್ಲಾದೇಶದ ಗಡಿಯನ್ನು ಅಕ್ರಮವಾಗಿ ದಾಟಿ ಭಾರತ ಪ್ರವೇಶಿಸಿದ್ದರು. ಜೀವನೋಪಾಯಕ್ಕಾಗಿ ಅವರು ಬುಧವಾರ ಪೇಟೆ ಪರಿಸರದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ಅವರು ಬಾಂಗ್ಲಾದೇಶದವರು ಎಂಬ ಪುರಾವೆಗಳು ಲಭ್ಯವಾದ ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.

ಸಂಪಾದಕೀಯ ನಿಲುವು

  • ನುಸುಳುಕೋರರು ದೇಶದೊಳಗೆ ನುಗ್ಗಿ ದೇಶದ ಮೂಲೆ ಮೂಲೆಗಳನ್ನು ತಲುಪುವವರೆಗೆ ಸರಕಾರಿ ಯಂತ್ರಗಳು ನಿದ್ರಿಸುತ್ತಿವೆಯೇ?
  • ನುಸುಳುಕೋರರಿಗೆ ಸಹಾಯ ಮಾಡುವವರು ಮತ್ತು ಅವರಿಗೆ ಆಶ್ರಯ ನೀಡುವವರನ್ನೂ ಜೈಲಿಗೆ ಹಾಕಿ!