
ನವದೆಹಲಿ – ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್ ಅತ್ಯಂತ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಬಹುಶಃ ತನ್ನ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಗುಪ್ತಚರ ಸಂಸ್ಥೆಗಳ ಹೇಳಿಕೆ ಪ್ರಕಾರ, ಮಸೂದ್ ಅಜರ್‌ನ ಆರೋಗ್ಯ ಅಷ್ಟೊಂದು ಗಂಭೀರವಾಗಿಲ್ಲ; ಆದರೂ ಅವನು ದೈಹಿಕವಾಗಿ ದುರ್ಬಲನಾಗಿದ್ದಾನೆ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಕುಸಿದಿದ್ದಾನೆ. ಇತರ ಭಯೋತ್ಪಾದಕರ ಮನೋಸ್ಥೈರ್ಯ ಕುಸಿಯಬಾರದು ಎಂಬ ಉದ್ದೇಶದಿಂದ ಭಯೋತ್ಪಾದಕ ಸಂಘಟನೆಯ ನಾಯಕತ್ವವು ಅವನನ್ನು ಉದ್ದೇಶಪೂರ್ವಕವಾಗಿ ಮರೆಮಾಚಿಟ್ಟಿದೆ.
ಭಾರತೀಯ ಸೇನೆಯ ‘ಆಪರೇಷನ್ ಸಿಂದೂರ್’ನಲ್ಲಿ ಮಸೂದ್ ಅಜರ್‌ನ ಕುಟುಂಬದ ಅನೇಕ ಸದಸ್ಯರು ಸಾವನ್ನಪ್ಪಿದ್ದರು. ಇದರಿಂದ ಅವನು ಇನ್ನೂ ಆಘಾತದಲ್ಲಿದ್ದಾನೆ. ಇದರ ನಂತರ, ಅವನು ತನ್ನನ್ನು ತಾನು ಸಂಪೂರ್ಣವಾಗಿ ಪ್ರತ್ಯೇಕಿಸಿಕೊಂಡಿದ್ದಾನೆ. ಹಿಂದೆ ಅವನು ಪ್ರತಿದಿನ ಸಂಘಟನೆಯ ಜನರನ್ನು ಭೇಟಿಯಾಗುತ್ತಿದ್ದನು ಮತ್ತು ಹೊಸದಾಗಿ ನೇಮಕಗೊಂಡವರೊಂದಿಗೆ ಸಂವಾದ ನಡೆಸುತ್ತಿದ್ದನು; ಆದರೆ ಈಗ ಅವನು ಅಂತಹ ಕೆಲಸಗಳನ್ನು ಮಾಡುವುದೇ ಇಲ್ಲ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ