
ಮುಂಬಯಿ – ನಟಿ ಚಾಹತ್ ಖನ್ನಾ ಅವರು 2024 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ತಾನು ಮತಾಂತರಗೊಂಡ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದರು. ಆದರೆ, ಈಗ ಅವರು ಮತ್ತೆ ‘ಸನಾತನ’ ಧರ್ಮಕ್ಕೆ ಮರಳಿದ್ದಾರೆ. ಈ ಕುರಿತು ಮಾತನಾಡಿರುವ ಚಾಹತ್, “ಅದೃಷ್ಟವಶಾತ್ ನಾನು ಮತ್ತೆ ನನ್ನ ಸನಾತನ ಧರ್ಮದ ಬೇರುಗಳಿಗೆ ಮರಳಿದಾಗ, ನನಗೆ ಅನೇಕ ವಿಷಯಗಳ ಹಿಂದಿನ ಸತ್ಯ ಅರ್ಥವಾಯಿತು. ನಾನು ಮತಾಂತರಗೊಳ್ಳುವುದು ಅನೇಕರಿಗೆ ಇಷ್ಟವಿರಲಿಲ್ಲ; ಆದರೆ ನನಗೆ ನಿಕಾಹ್ (ವಿವಾಹ) ಮಾಡಿಕೊಳ್ಳಬೇಕಿತ್ತು, ಹಾಗಾಗಿ ನಾನು ಅದನ್ನು ಮಾಡಿದೆ. ನನ್ನ ಮುಸ್ಲಿಂ ಪತಿ ಫರ್ಹಾನ್ ಮಿರ್ಜಾ ನನ್ನ ದಾರಿ ತಪ್ಪಿಸಿದ್ದರು. ಸಂಶಯ ಪಡುವುದು, ವಿವಿಧ ಆರೋಪಗಳನ್ನು ಮಾಡುವುದು, ಹಲ್ಲೆ ಮತ್ತು ಅಶ್ಲೀಲವಾಗಿ ನಿಂದಿಸುವುದು, ಲೈಂಗಿಕ ಮತ್ತು ಮಾನಸಿಕ ಕಿರುಕುಳ, ಹಾಗೆಯೇ ಆರ್ಥಿಕ ನಷ್ಟದಿಂದ ನಾನು ಬೇಸತ್ತಿದ್ದೆ,” ಎಂದು ಹೇಳಿದ್ದಾರೆ. (ಮತಾಂಧರ ನೈಜ ಸ್ವರೂಪವನ್ನು ತಿಳಿಯಿರಿ! – ಸಂಪಾದಕರು)
🚨 Actress Chahatt Khanna says she has returned to Sanatan Dharma after a painful marriage experience.
She alleged facing suspicion, abuse, harassment, assault, and financial loss during her relationship with Farhan Mirza. She also said she felt manipulated into conversion for… pic.twitter.com/uBkc2KkNdR
— Sanatan Prabhat (@SanatanPrabhat) April 18, 2026
2018 ರಲ್ಲಿ ಚಾಹತ್ ಖನ್ನಾ ಅವರು ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಕಾರಣ ನೀಡಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಪತಿ ಅಲ್ಲಿಗೆ ಬರುತ್ತಿದ್ದರು ಮತ್ತು ಸಹ-ಕಲಾವಿದರ ಜೊತೆಗಿನ ಚಿತ್ರೀಕರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಮಾಡುತ್ತಿದ್ದರು. ಅವರ ಮೇಲೆ ನಿಗಾ ಇಡಲಾಗುತ್ತಿತ್ತು. ಇಬ್ಬರೂ ಹೆಣ್ಣು ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯಲು ಅನುಮತಿ ಇರಲಿಲ್ಲ ಎಂದು ಚಾಹತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಾಹತ್ ಖನ್ನಾ ಮಾತು ಮುಂದುವರೆಸಿ, “ನಿನ್ನ ದೇವರನ್ನು ಪೂಜಿಸಬೇಡ, ಅದು ಸರಿಯಲ್ಲ ಎಂದು ನನಗೆ ಹೇಳಲಾಗಿತ್ತು. ದಾರಿ ತಪ್ಪಿದ ಮಗುವಿನಂತೆ ನಾನು ಆ ಹಾದಿಯಲ್ಲಿ ನಡೆದೆ; ಆದರೆ ಈಗ ನಾನು ಸಂತೋಷವಾಗಿದ್ದೇನೆ. ತುಂಬಾ ಉತ್ತಮ ಸ್ಥಿತಿಯಲ್ಲಿದ್ದೇನೆ. ನಾನು ಅದರಿಂದ ಕಲಿತ್ತಿದ್ದೇನೆ. ಈಗ ಯಾವುದು ಸರಿ, ಯಾವುದು ತಪ್ಪು ಎಂಬುದು ನನಗೆ ಅರ್ಥವಾಗುತ್ತಿದೆ ಮತ್ತು ನಾನು ಈಗ ಬಹಳ ಪ್ರಜ್ಞಾಪೂರ್ವಕವಾಗಿ ಜೀವನ ನಡೆಸುತ್ತಿದ್ದೇನೆ. ವಿಚ್ಛೇದನದ ನಂತರ ನನ್ನ ಮೂಲ ಧರ್ಮಕ್ಕೆ ಮರಳಲು ನನಗೆ ಸಾಕಷ್ಟು ಸಮಯ ಬೇಕಾಯಿತು,” ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ